ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಪಲ್ಲತಡ್ಕ ರಾಘವ ಗೌಡ ಅವರ ಮಿಲ್ಕ್ ಮಾಸ್ಟರ್ ಹಾಲು ಕರೆಯುವ ಯಂತ್ರದ ಕೈಗಾರಿಕಾ ಸಂಸ್ಥೆ ಮುರುಳ್ಯ ಇಲ್ಲಿಗೆ ಭೇಟಿ ನೀಡಲಾಗಿತ್ತು. ಸ್ವ ಉದ್ಯಮ, ಮತ್ತು ಉದ್ಯಮ ಶೀಲತೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಭೇಟಿ ನಡೆಸಲಾಗಿತ್ತು. ಸಂಸ್ಥೆಯ ಸಿಇಓ ಕುಸುಮಾಧರ ಕೇಪುಳಕಜೆ ಮತ್ತು ಮೈನ ಪಿ.ಆರ್ ಅವರು ಯಂತ್ರಗಳ ಆವಿ?ರಕ ಹಂತಗಳು ಮತ್ತು ಕಾರ್ಯ ಚಾಲನೆಯ ಬಗ್ಗೆ ಮಾಹಿತಿ ನೀಡಿದರು. ಯಂತ್ರ ತಯಾರಿಯ ವಿವಿಧ ಹಂತಗಳ ಬಗ್ಗೆ ನೌಕರ ವೃಂದದವರು ಪ್ರಾತ್ಯಕ್ಷಿಕೆ ನೀಡಿದರು . ಈ ಸಂದರ್ಭದಲ್ಲಿ ಶ್ರೀಮತಿ ಲೀಲಾವತಿ ಪಲ್ಲತಡ್ಕ ಉಪಸ್ಥಿತರಿದ್ದರು. ‘ಮಿಲ್ಕ್ ಮಾಸ್ಟರ್ ಇಂಜಿನಿಯರಿಂಗ್ ಸಂಸ್ಥೆ’ ಉದ್ಯಮದ ಕುರಿತು ಮಧು ಪಿ ಆರ್., ಇಂಜಿನಿಯರ್ ಯತೀಶ್ ಪಾಲೋಳಿ ಮತ್ತು ನೌಕರರು ಮಾಹಿತಿ ನೀಡಿದರು. ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯ ಅವರು ಮಾರ್ಗದರ್ಶನದಲ್ಲಿ ಉಪನ್ಯಾಸಕಿಯರಾದ ಸಾವಿತ್ರಿ ಕೆ ಮತ್ತು ಬೇಬಿ ವಿದ್ಯಾ ಪಿ.ಬಿ. ಹಾಗೂ ಕಲಾ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಭೇಟಿ ನೀಡಿದ್ದರು. ಉಪನ್ಯಾಸಕಿ ದೀಕ್ಷಾ ಭೇಟಿಯ ಸಂಯೋಜನೆಯಲ್ಲಿ ಸಹಕರಿಸಿದರು.
- Thursday
- November 21st, 2024