ಸಮಾಜ ಸೇವೆಯಲ್ಲಿ ಜೊತೆಗೆ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗುವುದರ ಜೊತೆಗೆ ನೂರಾರು ಜೀವಗಳ ಉಳಿಸಿದ ಯುವ ಸಂಘಟನ ಚತುರ ಈ ಶೈಲೇಶ್ ಅಂಬೆಕಲ್ಲು.
ಇವರು ಯುವಜನ ಸಂಯುಕ್ತ ಮಂಡಳಿ ಯ ಅಧ್ಯಕ್ಷರಾಗಿ ತಮ್ಮ ಊರಿನ ಹಾಗೂ ತಾಲೂಕಿನ ವಿವಿಧೆಡೆ ನೂರಾರು ಯುವಕ ಮಂಡಲಗಳ ಹುಟ್ಟುಹಾಕುವುದರ ಜತೆಗೆ ಅದರಿಗೆ ಬೇಕಾದ ಪ್ರೋತ್ಸಾಹ ನೀಡಿ, ಬೆಳೆವಣಿಗೆ ಶ್ರಮಿಸಿ ನಾಯಕರಾದರು.
ರಾಜಕೀಯದ ಕಡೆಗೆ ಅಷ್ಟೇನೂ ಆಸಕ್ತಿ ವಹಿಸದ ಅವರು ಪಕ್ಷೇತರರಾಗಿ ಸ್ಪರ್ಧಿಸಿದರೂ ಗೆಲ್ಲುವ ಶಕ್ತಿ ಹೊಂದಿದ್ದಾರೆ ಎಂಬುದು ಹಲವು ಭಾರಿ ಸಾಬೀತಾಗಿದೆ. ಪಸ್ತುತ ದೇವಚಳ್ಳ ಗ್ರಾ.ಪಂ.ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜನಪ್ರತಿಯಾಗಿ ಏನೆಲ್ಲಾ ಮಾಡಬೇಕು ಎಂಬುದಕ್ಕೂ ಶೈಲೇಶ್ ಅಂಬೆಕಲ್ಲು ಮಾದರಿ. ಕೊರೊನಾ ಸಂಕಷ್ಟ ಕಾಲದಲ್ಲಿ ಕೂಡ ತನ್ನ ಕ್ಷೇತ್ರದ, ಗ್ರಾಮದ ಮನೆಗಳಿಗೆ ಪಡಿತರ ವಿತರಣೆ, ತುರ್ತು ಸೇವೆಗಳಿಗೆ ಹಗಲಿರುಳು ಶ್ರಮಿಸಿದ ಜನ ಸೇವಕ. ಜನ ಯಾವುದೇ ಸಮಸ್ಯೆ ಹೇಳಿ ಫೋನ್ ಮಾಡಿದರೂ ಅದಕ್ಕೆ ತನ್ನಿಂದ ಅಥವಾ ಯಾರಿಂದ ಮಾಡಿಸಬೇಕೋ ಅವರಿಂದ ಮಾಡಿಸಿಕೊಡುವ ಗುಣ ಬೇಳೆಸಿಕೊಂಡಿದ್ದರಿಂದಲೇ ಪಕ್ಷೇತರರಾಗಿ ಗೆಲುವು ಕಂಡವರು ಇವರು.
ಯಾವುದೇ ಪ್ರಚಾರ, ಆಡಂಬರ ಬಯಸದೇ ಸದ್ದಿಲ್ಲದೇ ರಕ್ತದಾನ ಮಾಡುತ್ತ ಬಂದಿದ್ದಾರೆ. ಹಲವರಿಗೆ ಅವರು 100 ನೇ ಬಾರಿಗೆ ರಕ್ತದಾನ ಮಾಡುತ್ತಿರುವುದು ಎಂದೇ ಗೊತ್ತಿಲ್ಲ. ಅವರ ಈ ಸಾಧನೆ, ಸಮಾಜಸೇವೆಗೆ ಇನ್ನಷ್ಟೂ ಪ್ರೇರಣೆ ಹಾಗೂ ಅವಕಾಶ ಸಿಗಲಿ ಎಂಬುದೇ ನಮ್ಮ ಹಾರೈಕೆ.