ಸುಳ್ಯ ರಥಬೀದಿಯಲ್ಲಿರುವ ಕಟ್ಟೆಕಾರ್ ಕಾಂಪ್ಲೆಕ್ಸ್ ನಲ್ಲಿ ಜನತಾದಳದ (ಜಾ) ಕಚೇರಿ ಉದ್ಘಾಟನೆ ನ.28 ರಂದು ನಡೆಯಿತು.ಕಚೇರಿಯನ್ನು ರಾಜ್ಯ ಜೆ ಡಿ ಎಸ್ ವಕ್ತಾರ ಎಂ ಬಿ ಸದಾಶಿವ ಉದ್ಘಾಟಿಸಿ ಶುಭ ಹಾರೈಸಿದರು. ಜೆ ಡಿ ಎಸ್ ಜಿಲ್ಲಾದ್ಯಕ್ಷ ಜಾಕೆ ಮಾದವ ಗೌಡ ದೀಪ ಪ್ರಜ್ವಲಿಸಿದರು. ನಂತರ ಸುಳ್ಯ ಶ್ರೀ ರಾಮ ಪೇಟೆಯ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ಸಭಾ ಕಾರ್ಯಕ್ರಮ ನಡೆಸಲಾಯಿತು.
ಜೆಡಿಎಸ್ ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯ ಜೆಡಿಎಸ್ ವಕ್ತಾರ ಎಂ.ಬಿ ಸದಾಶಿವ ಮಾತನಾಡಿ ತಾಲೂಕಿನಲ್ಲಿ ಪಕ್ಷ ಕಟ್ಟಲು ನಾವೆಲ್ಲರೂ ಒಂದಾಗಿ ಪಣ ತೊಡಬೇಕಾಗಿದೆ, ೧೫ ವಲಯಗಳಾಗಿ ವಿಂಗಡಿಸಿ, ತಳ ಮಟ್ಟದಿಂದ ಪಕ್ಷ ಸಂಘಟಿಸುವ ಕೆಲಸ ಆಗಬೇಕು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಲು ಪಣತೊಡಬೇಕಾಗಿದೆ, ಬಿಜೆಪಿ ಮಾಡುವ ಟೀಕೆಯನ್ನು ಸಮರ್ಥವಾಗಿ ಎದುರಿಸುವ ಮತ್ತು ಪ್ರತ್ಯುತ್ತರಿಸುವ ದೈರ್ಯ ಜೆ ಡಿ ಎಸ್ ಹೊರತು ಪಡಿಸಿ ಬೇರೆ ಯಾವುದೇ ಪಕ್ಷ ಇಲ್ಲ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಜೆ ಡಿ ಎಸ್ ರಾಜ್ಯ ಕಾರ್ಯದರ್ಶಿ ಇನ್ಸಾಲ್ ಎಲಿಮಲೆ, ರಾಕೇಶ್ ಕುಂಟಿಕಾನ ಮಹಮ್ಮದ್ ಕುಂಞ ವಿಟ್ಲ, ಮೀರಾ ಸಾಹೇಬ್ ಕಡಬ, ಗೋರಿಕಟ್ಟೆ ಇಬ್ರಾಹಿಂ, ಪ್ರಭಾಕರ್, ರಶೀದ್, ಮೋಹನ್ ಹಾಗೂ ಪ್ರಮುಖರಾದ ದಾಮೋದರ ನಾರ್ಕೋಡು, ರೋಹನ್ ಪೀಟರ್, ಮೀರಾ ಸಾಹೇಬ್ ಕಡಬ, ನಾರಾಯಣ ಅಗ್ರಹಾರ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಚಿಮ್ಟಿಕಲ್, ರಾಂ ಕುಮಾರ್ ಸುಬ್ರಹ್ಮಣ್ಯ ಮಜೀದ್ ಸುಳ್ಯ, ತಿಲಕ್ ಸುಬ್ರಹ್ಮಣ್ಯ, ಅಗ್ರಹಾರ ದುಗ್ಗಪ್ಪ ನಾಯ್ಕ ಕುಲ್ಕುಂದ, ಉಮ್ಮರ್ ಕಲ್ಲುಗುಂಡಿ, ಪದ್ಮನಾಭ ಹರ್ಲಡ್ಕ, ದೇವರಾಂ ಬಾಳೆಕಜೆ, ಜನಾರ್ದನ ಗೌಡ ಉಳುವಾರು, ಸುದರ್ಶನ್ ಗೌಡ ಕೋಯಿಂಗೋಡಿ, ಸುರೇಶ್ ಕುಮಾರ್ ನಡ್ಕ ಮೋನಪ್ಪ ನಾಯ್ಕ ಕೊಲ್ಲಮೊಗ್ರ, ರಫೀಕ್ ಐವತ್ತೊಕ್ಲು, ಮೋಹನ್ ಕೊಲ್ಲಮೊಗ್ರ ಮೊದಲಾದವರಿದ್ದರು. ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯರಾದ ಎಂ .ಬಿ ಸದಾಶಿವ, ಜಾಕೆ ಮಾಧವ ಗೌಡ, ರಾಕೇಶ್ ಕುಂಟಿಕಾನ, ದಯಾಕರ ಆಳ್ವ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರವೀಣ್ ಮುಂಡೋಡಿ ಕಾರ್ಯಕ್ರಮ ನಿರೂಪಿಸಿದರು.