Ad Widget

ನೂರಾರು ದಾನಿಗಳು ಪ್ರಾರ್ಥಿಸಿದರೂ ಯಶಸ್ವಿಯಾಗದ ಚಿಕಿತ್ಸೆ – ಇಹಲೋಕ ತ್ಯಜಿಸಿದ ಬಾಲೆ ಖುಷಿ

. . . . . .

ಕ್ಯಾನ್ಸರ್ ಮತ್ತು ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ ಘಟನೆ ನ. 30ರಂದು ಅರಂತೋಡಿನಿಂದ ವರದಿಯಾಗಿದೆ.

ಅರಂತೋಡು ಪೇಟೆಯಲ್ಲಿ ಹೊಟೇಲ್ ನಡೆಸುತ್ತಿರುವ ಯೋಗೀಶ್ ಅವರ ಪುತ್ರಿ ಖುಷಿ (8) ಮೃತ ಬಾಲಕಿ. ಅರಂತೋಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ಬಾಲಕಿ ಖುಷಿ, ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನೂರಾರು ದಾನಿಗಳು ಬಾಲಕಿಯ ಚಿಕಿತ್ಸೆಗೆ ಸಹಾಯ ಹಸ್ತ ಚಾಚಿ ದೇವರಲ್ಲಿ ಪ್ರಾರ್ಥಿಸಿದ್ದರೂ ಬದುಕಿ ಬರಲಿಲ್ಲ ಖುಷಿ. ಮೃತ ಬಾಲಕಿ ತಂದೆ ಯೋಗೀಶ್, ತಾಯಿ ಲಲಿತಾ, ಇಬ್ಬರು ಸಹೋದರರನ್ನು ಅಗಲಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!