ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ನಾರಾಯಣ ಬೊಮ್ಮೆಟ್ಟಿ ಹಾಗೂ ನೂತನ ಉಪಾಧ್ಯಕ್ಷರಾಗಿ ಕರುಣಾಕರ ರೈ ಕುಕ್ಕಂದೂರು ಅವಿರೋಧವಾಗಿ ಆಯ್ಕೆಯಾದರು. ಎರಡೂವರೆ ವರ್ಷದ ಅವಧಿಗೆ ಡಾ. ಗೋಪಾಲಕೃಷ್ಣಭಟ್ ಅಧ್ಯಕ್ಷರಾಗಿದ್ದು, ಒಪ್ಪಂದದ ಪ್ರಕಾರ ಅಧ್ಯಕ್ಷತೆಗೆ ರಾಜೀನಾಮೆ ಸಲ್ಲಿಸಿದ್ದರು. ಅಧ್ಯಕ್ಷರಾಗಿ ಪ್ರಸ್ತುತ ಉಪಾಧ್ಯಕ್ಷರಾಗಿದ್ದ ನಾರಾಯಣ ಬೊಮ್ಮೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದರು. ಉಪಾಧ್ಯಕ್ಷರಾಗಿ ನಿರ್ದೇಶಕ ಕರುಣಾಕರ ರೈ ಕುಕ್ಕಂದೂರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ, ಸಹಕಾರದ ಸಂಘದ ನಿರ್ಗಮಿತ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ನಿರ್ದೇಶಕರುಗಳಾದ ಶ್ರೀಕೃಷ್ಣ ಭಟ್ ನೆಡಿಲು, ಸುಖೇಶ್ ಅಡ್ಕಾರುಪದವು, ಮಹೇಶ್ವರ ಕಾರಿಂಜ, ಸೀತಾರಾಮ ಮಠ, ಶೇಷಪ್ಪ ನಾಯ್ಕ ಕಜೆಗದ್ದೆ, ಗಣೇಶ್ ಅಂಬಾಡಿಮೂಲೆ, ಶ್ರೀಮತಿ ಪ್ರೇಮಲತಾ ಪಲ್ಲತ್ತಡ್ಕ, ಶ್ರೀಮತಿ ಭಾರತಿ ಪಿ.ಕೆ. ಕಜೆಗದ್ದೆ, ಶ್ರೀಮತಿ ಸಾವಿತ್ರಿ ಕಾರಿಂಜ, ವಲಯ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ , ಕನಕಮಜಲು ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ, ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವಸಂತ ಗಬ್ಬಲಡ್ಕ, ಹೇಮಂತ್ ಮಠ, ಜಗನ್ನಾಥ ಮಾಣಿಮಜಲು, ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ದೇವಕಿ ಕುದ್ಕುಳಿ, ಸದಸ್ಯೆ ಶ್ರೀಮತಿ ಶಾರದಾ ಉಗ್ಗಮೂಲೆ ಮೊದಲಾದವರು ಉಪಸ್ಥಿತರಿದ್ದರು.
- Sunday
- November 24th, 2024