Ad Widget

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅಮರ ಸುಳ್ಯ ಕ್ರಾಂತಿಯ ವಿಶೇಷ ಉಪನ್ಯಾಸ

. . . . . .

ಸುಳ್ಯ: “ಅಮರ ಸುಳ್ಯ – ಈ ಮಣ್ಣಿನ ಕ್ರಾಂತಿ” ಎಂಬ ವಿಷಯದಲ್ಲಿ ನೆಹರೂ ಮೆಮೋರಿಯಲ್ ಕಾಲೇಜಿನ ಇತಿಹಾಸ ವಿಭಾಗವು ನವೆಂಬರ್ 30ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ ‘ರಿಕಾಲಿಂಗ್ ಅಮರ ಸುಳ್ಯ’ ಪುಸ್ತಕದ ಲೇಖಕರಾದ, ಶ್ರೀ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ| ಬಾಲಚಂದ್ರ ಗೌಡ ಎಮ್. ಅವರು ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ರುದ್ರಕುಮಾರ್ ಎಮ್.ಎಮ್. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾದ ಇತಿಹಾಸ ವಿಭಾಗದ ಮುಖ್ಯಸ್ಥ, ಪ್ರೊ| ತಿಪ್ಪೆಸ್ವಾಮಿ ಡಿ.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು.

“ಕ್ರಾಂತಿಕಾರಿಗಳ ಮಣ್ಣಾದ ಸುಳ್ಯವನ್ನು ಮುಖ್ಯವಾಗಿ ಶಿಕ್ಷಣ ಹಾಗೂ ಬಹುತೇಕ ಅಭಿವೃದ್ಧಿ, ಇವೆರಡರಿಂದ ಬ್ರಿಟಿಷರು ದೂರವೇ ಇರಿಸಿದ್ದರು. 1837ನೇ ಇಸವಿಯ ಅಕ್ಟೋಬರ್ ತಿಂಗಳಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು ಅಮರ ಸುಳ್ಯ ಕ್ರಾಂತಿಯ ಕುರಿತು ಕಠಿಣ ನಿರ್ಬಂಧವನ್ನೂ ಹೇರಿ ಬಲವಂತದಿಂದ ಮರೆಸಲು ಪ್ರಾರಂಭಿಸಿತ್ತು. ಅಂತದ್ದರಲ್ಲಿ 185 ವರ್ಷಗಳ ಬಳಿಕ ಸುಳ್ಯದ ಆಧುನಿಕ ಶಿಲ್ಪಿ ಡಾ| ಕುರುಂಜಿ ವೆಂಕಟರಮಣ ಗೌಡರವರಿದ ಸ್ಥಾಪಿಸಲ್ಪಟ್ಟ ಸುಳ್ಯದ ಪ್ರಥಮ ಕಾಲೇಜಾದ ನೆಹರು ಮೆಮೋರಿಯಲ್ ಕಾಲೇಜಿನ ವೇದಿಕೆಯಲ್ಲಿ ಈ ಮಣ್ಣಿನ ಹೋರಾಟವನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮವು ಸ್ವಾತಂತ್ರ್ಯದ ನಂತರದ ಅಮೃತ ಕಾಲದ ನಿಜ ಅರ್ಥದ ಆಚರಣೆ” ಎಂದು ಲೇಖಕ ಅನಿಂದಿತ್ ಗೌಡ ಅವರು ಅಭಿಪ್ರಾಯಪಟ್ಟರು.

ವಿಧ್ಯಾರ್ಥಿನಿಗಳಾದ ಕು|ಪ್ರಾಪ್ತಿ ಪ್ರಾರ್ಥನೆ ಸಲ್ಲಿಸಿದರು, ಕು| ಗಾನ ಸ್ವಾಗತಿಸಿದರು. ಕು|ವೈಶಾಲಿ ಡಿ.ವಿ. ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ವಿಧ್ಯಾರ್ಥಿ ಕಿಶನ್ ಧನ್ಯವಾದ ಸಲ್ಲಿಸಿದರು. ಕುಮಾರಿ ಚೈತನ್ಯ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು‌.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!