ಸುಳ್ಯ ತಾಲೂಕಿನ ಹೆಚ್ಚಿನ ಕಡೆ ಗೋ ಕಳ್ಳತನ ಹಾಗು ಗೋ ಕಳ್ಳ ಸಾಗಾಣಿಕೆ ನಡೀತಾ ಇದೆ.ಕೆಲವರು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ನಮ್ಮ ಸಂಘಟನೆಯ ಕಾರ್ಯಕರ್ತರು ಇದರ ವಿರುದ್ಧ ಹೋರಾಡುತ್ತಲೇ ಬಂದಿದ್ದಾರೆ.
ವಿಶ್ವ ಹಿಂದೂ ಪರಿಷದ್ ಬಜರಂಗದಳ ಹುಟ್ಟಿನಿಂದಲೇ ಗೋಹತ್ಯೆ ಹಾಗು ಗೋಕಳ್ಳತನದ ವಿರುದ್ಧ ಧ್ವನಿ ಎತ್ತಿ ಹೋರಾಟವನ್ನು ಮಾಡುತ್ತಲೇ ಇದೆ.ಆದರೆ ಸುಮಾರು ದಿನಗಳಿಂದ ಸುಳ್ಯದ ಆಸುಪಾಸಿನಲ್ಲಿ ನಡೀತಿದ್ದ ಗೋಕಳ್ಳರನ್ನು ಪತ್ತೆ ಹಚ್ಚುವ ಕಾರ್ಯ ಸಂಘಟನೆ ಮಾಡುತ್ತಲೇ ಇತ್ತು. ಹಾಗಾಗಿ ನಿನ್ನೆ ದುಗ್ಗಲಡ್ಕದಲ್ಲಿ ನಡೆದ ಘಟನೆ ಕೂಡ ಒಂದು. ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳನ್ನು ಹಿಂದೂ ಕಾರ್ಯಕರ್ತರು ತಡೆದು ರಕ್ಷಿಸಿದ್ದಾರೆ. ಆದರೆ ಕಳ್ಳತನ ಮಾಡಿ ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಿಸಿ ಕಸಾಯಿಖಾನೆಗೆ ಸಾಗಿಸುವವರಿಗೆ ಶಿಕ್ಷೆಯನ್ನು ನೀಡಿ, ರಕ್ಷಿಸಿದ ನಮ್ಮ ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡದೇ ಈ ದಂಧೆಯಲ್ಲಿ ಪಾಲ್ಗೊಂಡಿದ್ದವರ ವಿರುದ್ಧ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಮತ್ತು ಸುಳ್ಯ ತಾಲೂಕಿನಲ್ಲಿ ಇದೆ ರೀತಿ ಅಕ್ರಮವಾಗಿ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವುದು ಕಂಡು ಬಂದಲ್ಲಿ ಇದರ ವಿರುದ್ಧ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಆಗ್ರಹಿಸುತ್ತದೆ ಎಂದು ಸಂಚಾಲಕರಾದ ನಿಕೇಶ್ ಉಬರಡ್ಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- Friday
- November 22nd, 2024