Ad Widget

ಗಾಂಧಿನಗರ: ಪಟೇಲ್ ಕ್ಲಿನಿಕಲ್ ಲ್ಯಾಬೊರೇಟರಿ ಶುಭಾರಂಭ


ಗಾಂಧಿನಗರ ಆಲೆಟ್ಟಿ ರಸ್ತೆಯ ಸಮೀಪ ಬದ್ರುದ್ದೀನ್ ಪಟೇಲ್ ಹಾಗೂ ಹಾಜಿ ಇಸ್ಮಾಯಿಲ್ ರವರ ನೇತೃತ್ವದಲ್ಲಿ ನೂತನ ತಂತ್ರಜ್ಞಾನ ಹೊಂದಿರುವ ಪಟೇಲ್ ಕ್ಲಿನಿಕಲ್ ಲ್ಯಾಬೊರೇಟರಿ ಜೂ.15ರಂದು ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಶ್ರೀ ಚೆನ್ನಕೇಶವ ದೇವಸ್ಥಾನ ಮೋಕ್ತೇಸ ಹರ ಪ್ರಸಾದ್ ತುದಿಯಡ್ಕ ಉದ್ಘಾಟಿಸಿ ಸಂಸ್ಥೆಗೆ ಶುಭಹಾರೈಸಿದರು. ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ನೂತನ ಸಂಸ್ಥೆಗೆ ಶುಭ ಹಾರೈಸಿ, ಉಚಿತವಾಗಿ ಈ ದಿನದ ರಕ್ತ ಗುಂಪು ಪರಿಶೋಧನ ಕಾರ್ಯಕ್ಕೆ ಚಾಲನೆ ನೀಡಿದರು. ಮಾಜಿ ನಿರ್ದೇಶಕ ಹಾಜಿ ಪಿ.ಎ ಮಹಮ್ಮದ್ ರಕ್ತದ ಮಾದರಿಯನ್ನು ನೀಡಿ ಚಾಲನೆಗೆ ಸಹಕರಿಸಿದರು. ಈ ಸಂದರ್ಭದಲ್ಲಿ ಹಿರಿಯ ಉದ್ಯಮಿ ಅಹಮ್ಮದ್ ಪಟೇಲ್ ಅರಂತೋಡು, ಕಟ್ಟಡ ಮಾಲಕರ ಕೆ.ಎಂ ಮಹಮ್ಮದ್, ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟಿಕಾರ್, ಹಾಜಿ ಅಬೂಬಕ್ಕರ್, ಹಾಜಿ ಅಬ್ದುಲ್ ಮಜಿದ್ ಜನತಾ, ಹಬೀಬ್ ಪಟೇಲ್, ಸ್ಥಳೀಯ ವರ್ತಕರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಸಂಸ್ಥೆಯ ಮಾಲಕರು ನಮ್ಮಲ್ಲಿ ರಕ್ತ, ಕಫ, ಮಲ-ಮೂತ್ರ ಡಯಾಬಿಟಿಸ್ ಪರಿಶೀಲನೆಯನ್ನು ಶೀಘ್ರವಾಗಿ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮವನ್ನು ಪತ್ರಕರ್ತರಾದ ಹಸೈನಾರ್ ಜಯನಗರ ಸ್ವಾಗತಿಸಿ, ಶರೀಫ್ ಜಟ್ಟಿಪಳ್ಳ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!