ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ವಕ್ತಾರ ಭರತ್ ಮುಂಡೋಡಿ ರವರಿಂದ ಸೆ. 27ರಂದು ಪತ್ರಿಕಾಗೋಷ್ಟಿ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.ಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪಿ ಸಿ ಜಯರಾಮ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ಪಕ್ಷದ ನಾಯಕ ರಾಹುಲ್ ಗಾಂಧೀಯವರು ಭಾರತ್ ಜೋಡೋ ಕಾರ್ಯಕ್ರಮ ಭಾರತದ ಐಕ್ಯತೆ ಕಾರ್ಯಕ್ರಮ ನಡೆಸುತ್ತಿದ್ದಾರೆ. ಪ್ರೀತಿ ವಿಶ್ವಾಸದಿಂದ ಬದುಕಬೇಕು ಎಂಬ ದೃಷ್ಟಿಯಿಂದ ಸೆ.2 ರಿಂದ ಈ ಯಾತ್ರೆ ಪ್ರಾರಂಭವಾಗಿದ್ದು ಕನ್ಯಾಕುಮಾರಿಯಿಂದ ಕಾಶ್ಮೀರ ತನಕ ಆರಂಭವಾಗಿದ್ದು ತಮಿಳು ನಾಡಿನಿಂದ ಯಾತ್ರೆ ಆರಂಭವಾಗಿದ್ದು ಕೇರಳ ಪ್ರವೇಶದಲ್ಲಿ ಯಾತ್ರೆ ನಡೆಯುತ್ತಿದೆ. ಸೆ.30ರಂದು ಕರ್ನಾಟಕ ರಾಜ್ಯದಲ್ಲಿ ಈ ಯಾತ್ರೆ ನಡೆಯಲಿದೆ.
ಕರ್ನಾಟಕ ರಾಜ್ಯದಲ್ಲಿ 17 ದಿನಗಳ ಯಾತ್ರೆ ಸುಮಾರು. 511 km ನಡೆಯಲಿದ್ದೇವೆ. ಅ.17 ರಂದು ಬಳ್ಳಾರಿಯಲ್ಲಿ ಬ್ರಹತ್ ಸಮಾವೇಶ ನಡೆಯಲಿದೆ 150 ದಿನದ ಯಾತ್ರೆ 12 ರಾಜ್ಯ ಕ್ರಮಿಸುವ ಯಾತ್ರೆಯಾಗಿದೆ.
ಕಾರ್ನಾಟಕ ಪ್ರವೇಶಿಸುವ ಯಾತ್ರೆಯಲ್ಲಿ ಸುಳ್ಯ, ಕಡಬ ಬ್ಲಾಕ್ ಸುಳ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.
ಕೊಲ್ಲಮೊಗ್ರು ಹಾನಿಯಾದ ವಿಚಾರಕ್ಕೆ ಉಳ್ಳಾಲದ ಯು.ಟಿ ಖಾದರ್ ಮಾತು, ಸುಳ್ಯದ ಶಾಸಕ ಮೌನ – ಭರತ್ ಮುಂಡೋಡಿ
ನಂತರ ಗೋಷ್ಠಿಯಲ್ಲಿ ಮಾತನಾಡಿದ ಭರತ್ ಮುಂಡೋಡಿ, ಇತ್ತೀಚಿನ ಮಳೆಯಿಂದ ತಾಲೂಕಿನ ಕೆಲವು ಗ್ರಾಮಗಳಲ್ಲಿ ಅಪಾರವಾದ ಹಾನಿಯಾಗಿದ್ದು, ಇದಕ್ಕೆ ಶಾಸಕರಿಂದ ಯಾವುದೇ ಪರಿಹಾರ ಕೊಡುವ ನಿರೀಕ್ಷೆ ಕಂಡುಬಂದಿಲ್ಲ. ಕೊಲ್ಲಮೊಗ್ರು ಕಡಂಬಳ ಸೇತುವೆ ಸಂಪರ್ಕ ಸರಿಯಾಗದ ಕಾರಣದಿಂದ ಸ್ಥಳೀಯರು ಅನೇಕರಿಗೆ ಮನವಿ ಮಾಡಿದಾಗ ಯಾರಿಂದಲೂ ಸಹಾಯವಾಗದ ಕಾರಣದಿಂದ ನಮ್ಮ ತಂಡ ಸಹಾಯ ಮಾಡಲು ಮುಂದಾದೇವು. ಅದರ ಹಿಂದಿನ ದಿನಗಳಲ್ಲಿ ಪ್ರತಿಕ್ರಿಯಿಸದ ಸಂಘಟಕರು ಮರುದಿನ ಸೇತುವೆ ಸರಿಪಡಿಸಲು ಮುಂದಾದರಲ್ಲದೆ ಕಾಂಗ್ರೆಸ್ ಪಕ್ಷ ನಾಟಕ ಮಾಡುತ್ತಿದ್ದಾರೆ ಎಂದು ಅವಮಾನಿಸಿದ್ದಾರೆ ಎಂದು ಹೇಳಿದರು.
ಕೊಲ್ಲಮೊಗ್ರು ಹಾನಿಯಾದ ವಿಚಾರಕ್ಕೆ ಉಳ್ಳಾಲದ ಯು.ಟಿ ಖಾದರ್ ಮಾತನಾಡಿದರೆ ಹೊರತು ಸುಳ್ಯದ ಶಾಸಕ ಮೌನವಾಗಿದ್ದದ್ದು ಅವಮಾನದ ವಿಚಾರ. ಅದಲ್ಲದೆ ಚುನಾವಣೆಯಲ್ಲಿ ಮಾತ್ರ ಟೆಂಡರ್ ನ್ನು ತಾತ್ಕಾಲಿಕವಾಗಿ ಮಾಡಿ ನಂತರ ಕೈ ಬಿಡುತ್ತಾರೆ. ಈ ರೀತಿ ಜನರನ್ನು ವಂಚನೆ ಮಾಡುತ್ತಿದ್ದಾರೆ ಹೊರತು ಜನಪರ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಳ್ಯದ ಕಸ್ತೂರಿ ರಂಗನ್ ವರದಿ ಪ್ರದೇಶವನ್ನು 10 ಕಿ.ಮೀ ನಿಂದ 0 ಕಿ.ಮೀ ತಂದಿರುತ್ತಿದ್ದರೆ ಅದರ ಸಮಸ್ಯೆ ಮುಗಿಯುತ್ತಾ ಇತ್ತು. ಕೊರೋನಾ ಸಮಯದಲ್ಲಿ ಪ್ಯಾಕೇಜ್ ಘೋಷಣೆ ಮಾಡಿದರೂ ಅನುಷ್ಠಾನಕ್ಕೆ ಬಂದಿಲ್ಲ ಹಾಗೂ ಕೊಳೆರೋಗ ಪರಿಹಾರ ಎಲ್ಲಿ ಹೋಗಿದೆ ಎಂದು ತಿಳಿದಿಲ್ಲ.ದೇವಚಳ್ಳ ಕಂದ್ರಪ್ಪಾಡಿ ರಸ್ತೆ ಗುದ್ದಲಿ ಪೂಜೆ ನಡೆಸಿದರು ಅದರ ಟೆಂಡರ್ ಬಂದಿಲ್ಲ ಅದರಂತೆ ಜಟ್ಟಿಪಳ್ಳ ರಸ್ತೆ ಕೂಡ ಹಾಗೆಯೇ ಆಗಿದೆ ಎಂದು ತಿಳಿದುಬಂದಿದೆ. ಭೂಕಂಪನದಿಂದ ಬಿರುಕು ಬಿಟ್ಟ ಮನೆಗೆ ಸುಮಾರು 5200 ರೂ. ಪರಿಹಾರ ಖಾತೆಗೆ ಹೋಗಿದೆ ಎಂದು ಹೇಳಿದ್ದಾರೆಯೇ ಹೊರತು ಬಂದಿಲ್ಲ. ಹಾಗಾಗೀ ಚುನಾವಣೆಯಲ್ಲಿ ಗೆದ್ದವರು ಜನಪರವಾಗಿ ಇರಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಮಹಮ್ಮದ್ ಕುಂಞಿ ಗೂನಡ್ಕ, ಸದಾನಂದ ಮಾವಂಜಿ, ಸಚಿನ್ ರಾಜ್ ಶೆಟ್ಟಿ, ಸುರೇಶ್ ಎಂ ಹೆಚ್, ಪಿ ಎಸ್ ಗಂಗಾಧರ, ಉಪಸ್ಥಿತರಿದ್ದರು.