ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಭಾಗ್ಯಲಕ್ಷ್ಮಿ ಸ್ತ್ರೀಶಕ್ತಿ ಗೊಂಚಲು ಸಮಿತಿ ಎಡಮಂಗಲ. ಶಿಶು ಮತ್ತುಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಮತ್ತು ಎಡಮಂಗಲ ಗ್ರಾಮ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ರಾಷ್ಟ್ರೀಯ ಪೋಷಣ್ ಮಾಸಾಚರಣೆ , ಪೋಷನ್ ಅಭಿಯಾನ,ಹೆಣ್ಣು ಶಿಶು ಪ್ರದರ್ಶನ ಕಾರ್ಯಕ್ರಮವು ಎಡಮಂಗಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಎಡಮಂಗಲ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಗೀತಾ ಪ್ರವೀಣ್ ರೈ ಯವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯೆ ದಿವ್ಯಾ ಯೋಗಾನಂದ ರವರು ದೀಪ ಬೆಳಗಿಸಿ ಉದ್ಘಾಟಿಸಿ ಪೋಷಣ ಮಾಸಾಚರಣೆ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಪ್ರಮೀಳಾ ಆರೋಗ್ಯ ಮತ್ತು ಪೌಷ್ಟಿಕಾಂಶದ ಬಗ್ಗೆ ಮಾಹಿತಿ ನೀಡಿದರು. ಅರೋಗ್ಯ ಇಲಾಖೆ ಯಿಂದ ಪೌಷ್ಠಿಕ ಆಹಾರ ಸಪ್ತಾಹದ ಅಂಗವಾಗಿ ವಿವಿಧ ಸ್ಥಳೀಯವಾಗಿ ಲಭ್ಯವಿರುವ ಪ್ರೊಟೀನ್ ಯುಕ್ತ ಬೇಲೆ ತರಕಾರಿ, ಸೊಪ್ಪಿನಿಂದ ವಿವಿಧ ತಿನಿಸುಗಳನ್ನು ತಯಾರಿಸಿದ ಅವರಿಗೆ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಹೆಣ್ಣು ಮಗು ಶಿಶು ಪ್ರದರ್ಶನ ಮತ್ತು ಬಹುಮಾನ ವಿತರಣೆ ಮಾಡಲಾಯಿತು. ಬ್ಯಾಂಕ್ ಖಾತೆ ಸಾಲ ಸೌಲಭ್ಯ ದ ಬಗ್ಗೆ ಸುಜಾತಾ ರವರು ಮಾಹಿತಿಯನ್ನು ನೀಡಿದರು ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ರಾಮಣ್ಣ ಜಾಲ್ತಾರು, ವನಿತಾ ಕಾಯ್ತಿಮಾರ್, ಮಾಜಿ ಅಧ್ಯಕ್ಷೆ ಸುಮಾ ನೂಚಿಲ , ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಜಿ ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರು, ಶುಭದಾ ಎಸ್ ರೈ, ಜಿಲ್ಲಾ ಮಾಹಿಳಾ ಮೋರ್ಚಾ ಉಪಾಧ್ಯಕ್ಷೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪವತಿ ಬಾಳಿಲ, ಮಾಹಿಳಾ ಮೋರ್ಚಾ ಪ್ರದಾನ ಕಾರ್ಯದರ್ಶಿ ಗೀತಾ ಶೇಖರ್, ಅರೋಗ್ಯ ಇಲಾಖೆ ಯ ಕಾರ್ಯಕರ್ತರು ಸಂಜೀವಿನಿಯ ಎಂ ಬಿ ಕೆ ಆಶಾದೀಪ, ಗೊಂಚಲು ಸಮಿತಿ ಯ ಅಧ್ಯಕ್ಷೆ ಉಮಾವತಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತರಾದ ಕಿಶೋರಿಯವರು ಪ್ರಾರ್ಥನೆ ಮಾಡಿದರು, ವಲಯ ಮೇಲ್ವಚಾರಕಿ ಶ್ರೀಮತಿ ರವಿಶ್ರೀ.ಕೆ. ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತೆ ರತ್ನವತಿ ಮಾಹಿತಿ ನೀಡಿದರು ಮತ್ತು ಸಿಬ್ಬಂದಿಯವರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಆಶಾ ಕಾರ್ಯಕರ್ತೆಯರು, , ಪೋಷಕರು, ಕಿಶೋರಿಯರು, ಸ್ತ್ರೀ ಶಕ್ತಿಯಸದಸ್ಯರು ಉಪಸ್ಥಿತರಿದ್ದರು, ಸುಳ್ಯ ಮಂಡಲ ಮಾಹಿಳಾ ಮೋರ್ಚಾದ ವತಿಯಿಂದ ಅಂಗನವಾಡಿ ಕಾರ್ಯಕರ್ತರನ್ನು ಗೌರವಿಸಿ ಶಿಶು ಪ್ರದರ್ಶನ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಎಲ್ಲ 15 ಮಕ್ಕಳಿಗೆ ಬಹುಮಾನನೀಡಲಾಯಿತು. ಆಶಾದೀಪ ರವರು ವಂದಿಸಿದರು. ಅಂಗನವಾಡಿ ಕಾರ್ಯಕರ್ತೆಶ್ರೀಮತಿ ಲೋಕೇಶ್ವರಿ ಕಾರ್ಯಕ್ರಮ ನಿರೂಪಿಸಿದರು.ಅಂಗನವಾಡಿ ಕಾರ್ಯಕರ್ತೆಯಾರಾದ ಸರೋಜಿನಿ, ಮೋಹಿನಿ, ಯಶೋದಾ ಕಿಶೋರಿ ಯವರು ಸಹಕರಿಸಿದರು
- Friday
- November 1st, 2024