Ad Widget

ಜೂನ್ 27 ರವರೆಗೆ ಅನುಮತಿ ಪಡೆದ ತುರ್ತು ಪ್ರಕರಣಗಳಿಗೆ ಮಾತ್ರ ಸುಳ್ಯ ನ್ಯಾಯಾಲಯದಲ್ಲಿ ಅವಕಾಶ – ವಕೀಲರ ಸಂಘ

ಕೊವಿಡ್ 19 ಹಿನ್ನೆಲೆಯಲ್ಲಿ ಮುಂದಿನ 15 ದಿನಗಳ ತನಕ ಅಂದರೆ ಜೂನ್ 27 ರ ತನಕ ಈ ಹಿಂದಿನಂತೆ ಅತೀ ಅಗತ್ಯದ ಪ್ರಕರಣಗಳನ್ನು ನಡೆಸುವಂತೆ ಮತ್ತು ಒಂದು ದಿನದಲ್ಲಿ ಕೇವಲ 20 ಪ್ರಕರಣಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಲಾಗಿದೆ .ಆದರಂತೆ ಪೂರ್ವಾನುಮತಿಯಿಲ್ಲದೆ ವಕೀಲರ , ಕೋರ್ಟು ನೌಕರರ ಹೊರತು ಬೇರೆ ಯಾರಿಗೂ ಕೂಡ ಪ್ರವೇಶ ಇರುವುದಿಲ್ಲ .ಒಳಪ್ರವೇಶ ಮಾಡುವ ಪ್ರತಿಯೊಬ್ಬರಿಗೂ ಶೀತ ಕೆಮ್ಮು ಜ್ವರದ ಬಗ್ಗೆ ಪರೀಕ್ಷೆ ನಡೆಸಿಯೇ ಬಿಡಲಾಗುದು .ಈ ಹಿಂದೆ ಹೊಸ ಪ್ರಕರಣಗಳ ದಾಖಲಿಸುವರೇ ಜಿಲ್ಲಾ ನ್ಯಾಯಾಲಯದಿಂದ ಪೂರ್ವಾನುಮತಿ ಪಡೆಯಬೇಕಾಗಿತ್ತು .ಆದರೆ ಈ ಆದೇಶದಲ್ಲಿ ಬದಲಾವಣೆ ಮಾಡಿ ಜಿಲ್ಲೆಯ ಬದಲು ಅಯಾಯ ನ್ಯಾಯಲಯದ ವ್ಯಾಪ್ತಿಗೆ ಬರುವ ಶಿರಸ್ತೇದಾರರಿಂದ ಎಸ್ ಎಂ ಎಸ್ ಅಥವಾ ವಾಟ್ಸಾಪ್ ಮುಲಕ ಅನುಮತಿ ಪಡೆದು ಅವರು ನೀಡಿದ ಸಮಯಕ್ಕೆ ದಾಖಲಿಸುವ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಬಾಕಿ ಉಳಿದಂತೆ ಈ ಹಿಂದಿನ ಎಲ್ಲಾ ಮಾರ್ಗದರ್ಶನದಂತೆ ನಡೆದುಕೊಳ್ಳುವಂತೆ ಮಾನ್ಯ ಕರ್ನಾಟಕ ಉಚ್ಛನ್ಯಾಯಾಲಯ ದಿನಾಂಕ ೧2/6/2020 ರಂದು ಹೊರಡಿಸಿದ ಹೊಸ ಆದೇಶದಲ್ಲಿ ಸೂಚಿಸಿರುವುದಾಗಿದೆ ಎಂದು ಸುಳ್ಯ ವಕೀಲರ ಸಂಘದ ಅಧ್ಯಕ್ಷ ಎಂ ವೆಂಕಪ್ಪ ಗೌಡ ತಿಳಿಸಿರುತ್ತಾರೆ .

. . . . . . .
ಎಂ. ವೆಂಕಪ್ಪ ಗೌಡ. ಅಧ್ಯಕ್ಷರು, ವಕೀಲರ ಸಂಘ ಸುಳ್ಯ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!