ರೈಟ್ ಟು ಲಿವ್ (ಕೋಟೆ ಫೌಂಡೇಷನ್) ಬೆಂಗಳೂರು ಮತ್ತು ಸ್ನೇಹ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಉದ್ಯೋಗ ಆಧಾರಿತ ಉಚಿತ ಕಂಪ್ಯೂಟರ್ ಮತ್ತು ಜೀವನ ಕೌಶಲ್ಯಗಳ ತರಬೇತಿ ಕೇಂದ್ರವನ್ನು ಆರಂಭಿಸಿದೆ.
ಪ್ರಸ್ತುತವಾಗಿ ಮೈಕ್ರೋಸಾಫ್ಟ್ ಆಫೀಸ್ 365, ಎಡೊಬೆ ಫೋಟೋಶಾಪ್/ ಕಾನ್ವ/ಮೈಕ್ರೋಸಾಫ್ಟ್, ಪಬ್ಲಿಷರ್ ( ಡಿಟಿಪಿ), ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್, ಟ್ಯಾಲಿ ಪ್ರೈಮ್, ಜಿಎಸ್ ಟಿ ಮತ್ತು ಐಟಿ ಫಿಲ್ಲಿಂಗ್, ಆನ್ಲೈನ್ ಬ್ಯಾಂಕಿಂಗ್, ವೆಬ್ಸೈಟ್ ಡಿಸೈನ್, ಗ್ರಾಫಿಕ್ ಡಿಸೈನ್, ಕ್ಲೌಡ್ ಆಫಿಸ್, ಆಡಿಯೋ ಮತ್ತು ವಿಡಿಯೋ ಎಡಿಟಿಂಗ್, ಲೈಫ್ ಸ್ಕಿಲ್ಸ್, ಸ್ಪೋಕನ್ ಇಂಗ್ಲೀಷ್, ರೆಸ್ಯೂಮ್ ಮತ್ತು ಇಂಟರ್ವಿವ್ ಪ್ರಿಪರೇಷನ್ ಕೋರ್ಸುಗಳು ಲಭ್ಯವಿರಲಿದೆ.
ಇದರ ಪ್ರಯೋಜನ ವನ್ನು 18 ರಿಂದ 46 ವಯೋಮಾನದ ಸುಳ್ಯದ ಯುವಕ,ಯುವತಿಯರು, ಗೃಹಿಣಿಯರು ಹಾಗೂ ವಿದ್ಯಾರ್ಥಿಗಳು ಪಡೆಯಬಹುದಾಗಿದೆ ಎಂದು ಕೋಟೆ ಫೌಂಡೇಷನ್ ಮತ್ತು ಸ್ನೇಹ ಶಿಕ್ಷಣ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸ್ನೇಹ ಶಿಕ್ಷಣ ಸಂಸ್ಥೆ ಅಥವಾ 9916087028 ನಂಬರ್ ಗೆ ಕರೆ ಮಾಡಬಹುದು.