Ad Widget

ಕರ್ತವ್ಯ ನಿರ್ಲಕ್ಷ್ಯ ದ ಆರೋಪ : ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಇಬ್ಬರು ನೌಕರರ ಅಮಾನತು

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಂಗಡಿ ಬಾಡಿಗೆ ವಿಚಾರದಲ್ಲಿ ಕರ್ತವ್ಯಲೋಪ ಮಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಇಬ್ಬರು ನೌಕರರನ್ನು ಅಮಾನತು ಮಾಡಿದ ಘಟನೆ ನಡೆದಿದೆ.

. . . . . . .

ದೇವಸ್ಥಾನಕ್ಕೆ ಸಂಬಂಧಿಸಿದ ಅಂಗಡಿಗಳ ಬಾಡಿಗೆಯನ್ನು ವಸೂಲಿ ಮಾಡುವಲ್ಲಿ ಎಡವಿರುವುದು ಈ ಅಮಾನತಿಗೆ ಕಾರಣ ಎಂದು ತಿಳಿದು ಬಂದಿದೆ. ದೇವಳದ ಆಡಳಿತ ಕಚೇರಿಯ ಸಿಬ್ಬಂದಿಗಳಾಗಿದ್ದು ಕೇಸ್ ವರ್ಕರ್ ಗಳಾಗಿರುವ ಬಾಲಸುಬ್ರಹ್ಮಣ್ಯ ಮಾರಾರ್ ಮತ್ತು ಲೋಕೇಶ್ ಎಂಬುವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಬೇರೆಯವರ ತಪ್ಪಿಗೆ ನೌಕರರನ್ನು ಬಲಿ ಪಡೆಯಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಈ ಮಧ್ಯೆ ಕುಕ್ಕೆಶ್ರೀ ದೇವಸ್ಥಾನಕ್ಕೆ ಸಂಬಂಧಿಸಿದ ಅಂಗಡಿಯನ್ನು ಬಾಡಿಗೆ ಪಡೆದು ಕೋಟಿಗೂ ಮಿಕ್ಕಿ ಬಾಡಿಗೆ ಪಾವತಿಸಲು ಬಾಕಿ ಉಳಿಸಿಕೊಂಡಿರುವವರ ಮೇಲೆ ಪೊಲೀಸ್ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಬಾಡಿಗೆದಾರರು ತಕ್ಷಣ ಬಾಡಿಗೆ ಪಾವತಿಸುವುದಾಗಿ ತಿಳಿಸಿದ ಮೇರೆಗೆ, ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇನ್ನಷ್ಟೆ ಒದಗಿಸ ಬೇಕಾಗಿರುವುದರಿಂದ ದೂರು ಇನ್ನಷ್ಟೆ ದಾಖಲಾಗಬೇಕಿದೆ ಎಂದು ತಿಳಿದು ಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!