Ad Widget

ಪಂಜ ವಲಯ ಮಟ್ಟದ ಪ್ರತಿಭಾ ಕಾರಂಜಿ-ಸರಕಾರಿ ಪ್ರೌಢ ಶಾಲೆ ಎಣ್ಮೂರಿಗೆ ಸಮಗ್ರ ಪ್ರಶಸ್ತಿ

ಸರಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿ ಸೆ.03 ರಂದು ಪಂಜ ವಲಯ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು. ಪ್ರತಿಭಾ ಕಾರಂಜಿಯನ್ನು ಮುರುಳ್ಯ ಗ್ರಾಮಪಂಚಾಯತ್ ಅಧ್ಯಕ್ಷರಾದ ಕುಮಾರಿ ಜಾನಕಿ ಮುರುಳ್ಯ ಉದ್ಘಾಟಿಸಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಶ್ರೀಮತಿ ಶೀತಲ್ ಯು.ಕೆ, ಶಿಕ್ಷಣ ಸಂಯೋಜಕರಾದ ಶ್ರೀಮತಿ ಸಂಧ್ಯಾ ಕುಮಾರಿ, ಪ್ರತಿಭಾ ಕಾರಂಜಿ ನೋಡೆಲ್ ಶ್ರೀ ವಸಂತ ಏನೆಕಲ್, BRP ಸುಬ್ರಹ್ಮಣ್ಯ ಕೆ.ಎನ್, CRP ಜಯಂತ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು..ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀ ಪದ್ಮನಾಭ ಗೌಡ ಪೂದೆ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಮಿತ್ರಾ ಕೆ ಸ್ವಾಗತಿಸಿ, ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ ದಿವ್ಯಾ.ಎಂ.ಕೆ ವಂದಿಸಿದರು. ಶಾಲಾ ಗಣಿತ ಶಿಕ್ಷಕ ಶ್ರೀ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.

. . . . . . . . .


ಸರಕಾರಿ ಪ್ರೌಢ ಶಾಲೆ ಎಣ್ಮೂರು ಪ್ರಥಮ ಸಮಗ್ರ ಪ್ರಶಸ್ತಿ ಪಡೆದರೆ, ಕುಮಾರಸ್ವಾಮಿ ಸುಬ್ರಹ್ಮಣ್ಯ ವಿದ್ಯಾಸಂಸ್ಥೆ ದ್ವಿತೀಯ ಸಮಗ್ರ ಪ್ರಶಸ್ತಿಗೆ ಭಾಜನವಾಯಿತು. ಎಣ್ಮೂರು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು ವಿನ್ಯಾಸ್ ಜಾಕೆ (ಮಿಮಿಕ್ರಿ) ಪ್ರಥಮ, ಉಜ್ವಲ್ (ಹಾಸ್ಯ) ಪ್ರಥಮ, ಪ್ರಿಯಾ RK ರೈ (ಛದ್ಮವೇಷ) ಪ್ರಥಮ,
ಸುಮಯ್ಯ (ಧಾ.ಪಠಣ) ಪ್ರಥಮ, ದಿಶಾ ಕೆ.ಜೆ (ಕನ್ನಡ ಭಾಷಣ) ಪ್ರಥಮ, ಆಯಿಷತ್ ಅಮೀರಾ (ಇಂಗ್ಲೀಷ್ ಭಾಷಣ) ಪ್ರಥಮ, ಆಯಿಷತುಲ್ ಅಫ್ರಾ(ಹಿಂದಿ ಭಾಷಣ) ಪ್ರಥಮ,
ಸುಮಯ್ಯ ಮತ್ತು ತಂಡ (ಕವ್ವಾಲಿ) ಪ್ರಥಮ, ಪ್ರೀತಿ RK ರೈ ಮತ್ತು ತಂಡ (ಜಾನಪದ ನೃತ್ಯ) ದ್ವಿತೀಯ, ಶಿವಾನಿ (ರಂಗೋಲಿ) ದ್ವಿತೀಯ, ನಂದಕಿಶೋರ (ಚಿತ್ರ ಕಲೆ) ದ್ವಿತೀಯ, ಸಾನಿಕ (ಭರತನಾಟ್ಯ) ದ್ವಿತೀಯ, ಗಗನ್ ಕನ್ನಡ ಭಾಷಣ (ಸಾಮಾನ್ಯ) ದ್ವಿತೀಯ,
ಯೋಗೀಶ (ಜನಪದ ಗೀತೆ) ತೃತೀಯ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading