ಬಾಲಾವಲಿಕಾರ್ ರಾಜಾಪುರ ಸಾರಸ್ವತ ಯುವ ಸಮಾಜ ಸುಳ್ಯ ಇದರ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶ ಚತುರ್ಥಿ ಪ್ರಯುಕ್ತ ಆ. 28 ರಂದು ಕೃಷ್ಣ ವೇಷ ಸ್ಪರ್ಧೆ, ವಿವಿಧ ಮನೋರಂಜನಾ ಮತ್ತು ಆಟೋಟ ಸ್ಪರ್ಧೆಗಳನ್ನು ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರ ಸುಳ್ಯ ಇಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯಲ್ಲಿ ದೇವದಾಸ್ ಪ್ರಭು, ಕೇಸರಿ ಪತ್ತುಕುಂಜ, ರಾಧಾಕೃಷ್ಣ ಪೈ ಗೊರವನಗುಂಡಿ, ಬಾಲಕೃಷ್ಣ ನಾಯಕ್ ಬೀರಮಂಗಲ, ನವೀನ್ ಪತ್ತುಕುಂಜ ಹಾಗೂ ಸಮಾಜ ಭಾಂಧವರು ಉಪಸ್ಥಿತರಿದ್ದರು. ಕೃಷ್ಣ ವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಆದ್ಯಾ ವಿರಾಜಪೇಟೆ ಹಾಗೂ ದ್ವಿತೀಯ ಸ್ಥಾನವನ್ನು ತನ್ವಿ ಮುಂಡೋಳಿಮೂಲೆ ಪಡೆದುಕೊಂಡರು. ವಿವಿಧ ಮನೋರಂಜನಾ ಮತ್ತು ಆಟೋಟ ಸ್ಪರ್ಧೆಗಳಲ್ಲಿ ಸಮಾಜ ಬಾಂಧವರು ಸಕ್ರೀಯವಾಗಿ ಪಾಲ್ಗೊಂಡರು. ಸಮಾರೋಪ ಸಮಾರಂಭದಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ, ಕೆ. ಆರ್. ಗೋಪಾಲಕೃಷ್ಣ ಬೊಳಿಯಮಜಲು, ಮೋಹನ್ ಪರಿವಾರಕಾನ, ಸಂಧ್ಯಾ ಕುಮಾರಿ ಕೊಡಿಯಾಲಬೈಲು ಉಪಸ್ಥಿತರಿದ್ದರು.