ಬೆಳ್ಳಾರೆ ಕಲ್ಪವೃಕ್ಷ ಆರ್ಕೇಡ್ ನಲ್ಲಿ ಆ. 30 ರಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯ ನಡಿಗೆ ಪೂರ್ವ ಭಾವಿ ಸಭೆ ನಡೆಯಿತು.
ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ. ಜಯರಾಮ ವಹಿಸಿದ್ದರು.
ಈ ಸಂದರ್ಭದಲ್ಲಿ ಭರತ್ ಮುಂಡೋಡಿ , ಕೆಪಿಸಿಸಿ ಸಂಯೋಜಕರಾದ ವೆಂಕಪ್ಪ ಗೌಡ ಹಾಗೂ ಕೃಷ್ಣಪ್ಪ ಮಾತಾನಾಡಿದರು.
ಕೆಪಿಸಿಸಿ ಸಂಯೋಜಕ ಪ್ರದೀಪ್ ರೈ ಪಾಂಬಾರು, ಬೆಳ್ಳಾರೆ ಸಿಇ ಬ್ಯಾಂಕ್ ಅಧ್ಯಕ್ಷರಾದ ಅನಿಲ್ ರೈ ಚಾವಡಿ ಬಾಗಿಲು, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸಚಿನ್ ರಾಜ್ ಶೆಟ್ಟಿ, ಬೆಳ್ಳಾರೆ ಗ್ರಾಮ ಸಮಿತಿ ಅಧ್ಯಕ್ಷ ರಾದ ಅನಿಲ್ ರೈ ಪುಡ್ಕಜೆ, ಹಿಂದುಳಿದ ವರ್ಗಗಳ ಅಧ್ಯಕ್ಷ ರಾದ ವಿಠಲ್ ದಾಸ್, ಮಾಜಿ ಅಧ್ಯಕ್ಷೆ ಶ್ರೀಮತಿ ಅನುಸೂಯ, ಬೆಳ್ಳಾರೆ ಸಿಇ ಬ್ಯಾಂಕ್ ಅಧ್ಯಕ್ಷ ಅಬ್ದುಲ್ ಬಶೀರ್, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾದ ಕಂದಸ್ವಾಮಿ, ಮುಸ್ತಫಾ, ಬಶೀರ್ ನೇಲ್ಯ ಮಜಲು, ಬಶೀರ್ ಉಮಿಕ್ಕಳ, ರಘುನಾಥ ರೈ ಕೊಡಿಯಾಲ, ಲಕ್ಷ್ಮಣ ದುರ್ಗಾ ನಗರ, ಉಮ್ಮರ್ ಪೆರುವಾಜೆ ಕರುಣಾಕರ ದುರ್ಗಾ ನಗರ, ವಿಜಯ ದುರ್ಗಾ ನಗರ, ದಿನೇಶ್ ದುರ್ಗಾ ನಗರ, ರಜಾಕ್ ಬಸ್ತಿಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.