ಮಂಡೆಕೋಲು ಗ್ರಾಮದ ಪೇರಾಲುಮೂಲೆ ಅಣ್ಣಪ್ಪ ಗೌಡರು(76) ಅಲ್ಪಕಾಲದ ಅಸೌಖ್ಯದಿಂದ ಆ. 30ರಂದು ಸ್ವಗೃಹದಲ್ಲಿ ನಿಧನರಾದರು. ಅವರು ಪತ್ನಿ ಲಲಿತಾ
ಪುತ್ರ ಮನೋಜ್ ಕುಮಾರ್, ಸೊಸೆ ರೇಷ್ಮಾ, ಪುತ್ರಿಯರಾದ ವೀಣಾ ಹೊನ್ನಪ್ಪ, ವಾಣಿ ಸತೀಶ್, ಗೀತಾ ಅಮರನಾಥ್ ಮೊಮ್ಮಕ್ಕಳು, ಅಳಿಯಂದಿರು, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಅವರು ಪೇರಾಲು ಬಜಪ್ಪಿಲ ಉಳ್ಳಾಕುಲು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಹಲವು ಧಾರ್ಮಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು.