ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಅಲೆಕ್ಕಾಡಿಯಲ್ಲಿ ಆ. 27ರಂದು ಭಾರತ್ ಸೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯ ವತಿಯಿಂದ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಕಬ್, ಬುಲ್ ಬುಲ್, ಸ್ಕಟ್, ಗೈಡ್, ರೋವರ್, ರೇಂಜರ್ ಸಂಸ್ಥೆಯು ದೇಶಭಕ್ತಿ ಗೀತ ಗಾಯನ ಸ್ಪರ್ಧೆಯನ್ನು ಆಯೋಜಿಸಿದೆ.ಗೀತಗಾಯನ ಸ್ಪರ್ಧೆಯನ್ನು ಮುರುಳ್ಯ ಶಾಲೆಯ ಎಸ್ ಡಿ ಎಂ ಸಿ ವೈ ಉಪಾಧ್ಯಕ್ಷ ಅವಿನಾಶ್ ಬಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ ಕೆ ವಹಿಸಿದ್ದರು. ಈ ಸಭೆಯಲ್ಲಿ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕರಾದ ವಸಂತ ಎನೇಕಲ್ಲು, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಬಾಲಕೃಷ್ಣ ಹೇಮಳ, ಸೋಮಶೇಖರ ನೇರಳ, ದಾಮೋದರ ನೇರಳ ಉಪಸ್ಥಿತರಿದ್ದರು.
ಮುರುಳ್ಯ ಶಾಲೆಯ ಮುಖ್ಯ ಶಿಕ್ಷಕಿ ಸ್ಥಳೀಯ ಸಂಸ್ಥೆಯ ಜೊತೆ ಕಾರ್ಯದರ್ಶಿ ಶ್ರೀಮತಿ ಶಶಿಕಲ ಪಿ ಸ್ವಾಗತಿಸಿ, ಕಾರ್ಯದರ್ಶಿ ಉದಯಕುಮಾರ್ ರೈ ಎಸ್ ವಂದಿಸಿದರು. ಉದ್ಘಾಟನಾ ಕಾರ್ಯಕ್ರಮವನ್ನು ಸ್ಕೌಟರ್ ಶಿವಪ್ರಸಾದ್ ಜಿ ಮತ್ತು ಗೈಡರ್ ಸರೋಜಿನಿ ಕೆ ನಿರೂಪಿಸಿದರು.
ಗೀತ ಗಾಯನ ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀ ಗಣೇಶ ನಡುವಳ ನೂಜಿಬಾಳ್ತಿಲ, ಜಯಂತ ಪಿ ಚಾರ್ವಾಕ, ಪುರೋಹಿತ್ ಸಚಿನ್ ಶರ್ಮ ಮುರುಳ್ಯ ಇದ್ದರು.ಸ್ಪರ್ಧೆಯಲ್ಲಿ 175 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭ
ಗೀತ ಗಾಯನ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮುರುಳ್ಯ ಶಾಲಾ ಎಸ್ ಡಿಎಂಸಿ ಅಧ್ಯಕ್ಷೆ ಶ್ರೀಮತಿ ಮಧು ಪಿ ಆರ್ ವಹಿಸಿದ್ದರು. ವಿಶೇಷ ಆಹ್ವಾನಿತರಾದ ನಿವೃತ್ತ ಶಿಕ್ಷಕರಾಗಿರುವ ವೆಂಕಪ್ಪಗೌಡ ಆಲಾಜೆ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಿ ಶುಭ ಹಾರೈಸಿದರು. ಮುರುಳ್ಯ ಶಾಲಾ ಗೈಡ್ ಶಿಕ್ಷಕಿ ನಳಿನಾಕ್ಷಿ ವಂದಿಸಿದರು.