ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ಆಶ್ರಯದಲ್ಲಿ ಆ.27 ರಂದು ನಾಲ್ಕೂರು ಗ್ರಾಮದ ಎರ್ಧಡ್ಕ ಎಂಬಲ್ಲಿ ಮೂಕಾಂಬಿಕಾ ಸಂಜೀವಿನಿ ಸಂಘ ಉದ್ಘಾಟನೆಗೊಂಡಿತು.
ಸಂಘದ ಹಿರಿಯ ಸದಸ್ಯರಾದ ಪಾರ್ವತಿ ಎರ್ಧಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ನೂತನ ಸಂಘದ ಅಧ್ಯಕ್ಷರಾಗಿ ಜ್ಯೋತಿ, ಕಾರ್ಯದರ್ಶಿಯಾಗಿ ಪ್ರಮೀಳಾ ಭಾಸ್ಕರ ಎರ್ಧಡ್ಕ ಆಯ್ಕೆಯಾದರು. ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಎಂ.ಬಿ.ಕೆ ಮಿತ್ರಕುಮಾರಿ ಹಾಗೂ ಒಕ್ಕೂಟದ ಎಲ್.ಸಿ.ಆರ್.ಪಿ ಶಾರದಾ ಕೊಂಬೆಟ್ಟು ಉಪಸ್ಥಿತರಿದ್ದು, ಸಂಜೀವಿನಿ ಸಂಘದ ಮಾಹಿತಿ ನೀಡಿ ಸಂಘದ ಅಧ್ಯಕ್ಷೆ ಹಾಗೂ ಕಾರ್ಯದರ್ಶಿಯವರಿಗೆ ಸಂಘದ ನಿರ್ಣಯ ಪುಸ್ತಕವನ್ನು ಹಸ್ತಾಂತರಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ