ಮೇಲಿನ ಮಾತು ರಾಜ್ಯ ಬಿಜೆಪಿಯ ನಿರ್ಧಾರಕ್ಕೆ ಸೂಕ್ತವಾದ ಮಾತುಗಳೆಂಬುದಾಗಿ ಸಾರ್ವಜನಿಕರ ಅನಿಸಿಕೆಯಾಗಿದೆ. ಕಾರಣವೇನೆಂದರೇ ಇತ್ತೀಚೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಅವರ ಕೋರ್ ಕಮಿಟಿ ತಂಡವು ರಾಜ್ಯ ಸಭೆ ಸದಸ್ಯರ ಅಭ್ಯರ್ಥಿ ತನಕ್ಕೆ ಸುಮಾರು 5 ಹೆಸರುಗಳನ್ನು ಹೈ ಕಮಾಂಡಿಗೆ ಶಿಫಾರಸ್ಸು ಮಾಡಿತ್ತು. ಆದರೆ ಅವುಗಳಲ್ಲಿ ಒಂದೂ ಹೆಸರನ್ನು ಪರಿಗಣಿಸದೇ ಇವರಾರ ಅರಿವಿಗೂ ಬಾರದ 2 ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದನ್ನು ಗಮನಿಸಿದಾಗ ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ನ್ನು ಟೀಕೆ ಮಾಡುತ್ತಿದ್ದು ಈ ಮಂದಿಗೆ ಈಗ ಸರಿಯಾದ ಉತ್ತರವೇ ಲಭಿಸಿದಂತಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಿಸುತಿದ್ದಾರೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಯಂ ವೆಂಕಪ್ಪಗೌಡ ಪತ್ರಿಕಾ ಹೇಳಿಕೆ ನೀಡಿದ್ದಾರೆ.
- Sunday
- November 24th, 2024