Ad Widget

ಹರಿಹರ ಪಲ್ಲತ್ತಡ್ಕ :- ಆ.30 ರಂದು 13ನೇ ವರ್ಷದ ಗಣೇಶೋತ್ಸವ

ಸಾರ್ವಜನಿಕ ಗಣೇಶೋತ್ಸವ ಸಮಿತಿ ಹರಿಹರ ಪಲ್ಲತ್ತಡ್ಕ ಇದರ ಆಶ್ರಯದಲ್ಲಿ ಆ.30 ಮಂಗಳವಾರದಿಂದ ಸೆ.01 ಗುರುವಾರದ ವರೆಗೆ ಶ್ರೀ ಹರಿಹರೇಶ್ವರ ದೇವಸ್ಥಾನದ ಸಹಕಾರದೊಂದಿಗೆ 13ನೇ ವರ್ಷದ ಗಣೇಶೋತ್ಸವ ನಡೆಯಲಿದೆ. ಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಆ.30 ರಂದು ಬೆಳಿಗ್ಗೆ 9:22 ಕ್ಕೆ ಶ್ರೀ ಗೌರಿ ಮೂರ್ತಿ ಪ್ರತಿಷ್ಠಾಪನೆ ನಂತರ ಗೌರಿ ಪೂಜೆ ನಡೆಯಲಿದೆ. ಸಂಜೆ 6:00 ಗಂಟೆಯಿಂದ ಶ್ರೀ ದೇವಿ ಭಜನಾ ಮಂಡಳಿ ಬಾಳುಗೋಡು ಹಾಗೂ ಸಂಜೆ 7:00 ಗಂಟೆಯಿಂದ ಶ್ರೀ ದುರ್ಗಾ ಭಜನಾ ಮಂಡಳಿ ನಡುಗಲ್ಲು-ಮರಕತ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 8:00 ಗಂಟೆಯಿಂದ ಶ್ರೀ ಗೌರಿ ದೇವಿಗೆ ಮಹಾಪೂಜೆ ನಡೆಯಲಿದೆ.
ಆ.31 ರಂದು ಪೂರ್ವಾಹ್ನ 10:42 ಕ್ಕೆ ಶ್ರೀ ಗಣೇಶ ಮೂರ್ತಿ ಪ್ರತಿಷ್ಠೆ ನಂತರ ಶ್ರೀ ಗಣಪತಿ ಪೂಜೆ, ಮಧ್ಯಾಹ್ನ ಮಹಾಪೂಜೆ ನಡೆಯಲಿದೆ.
ಸಂಜೆ 6:00 ಗಂಟೆಯಿಂದ ಕುಕ್ಕೇಶ್ರೀ ಭಜನಾ ಮಂಡಳಿ ಸುಬ್ರಹ್ಮಣ್ಯ ಹಾಗೂ ಸಂಜೆ 7:00 ಗಂಟೆಯಿಂದ ಶ್ರೀ ಹರಿಹರೇಶ್ವರ ಭಜನಾ ಮಂಡಳಿ ಹರಿಹರ ಇವರಿಂದ ದಾಸ ಸಾಹಿತ್ಯ ಪ್ರಾಜೆಕ್ಟ್ ತಿರುಪತಿ ತಿರುಮಲ ನಡೆಯಲಿದೆ.
ರಾತ್ರಿ 8:30 ಕ್ಕೆ ಮಹಾಪೂಜೆ ನಡೆಯಲಿದೆ.
ಸೆ.01 ರಂದು ಬೆಳಿಗ್ಗೆ 10:30 ಕ್ಕೆ ಚತುರ್ನಾಳಿಕೇರ ಗಣಪತಿ ಹವನ, ಮದ್ಯಾಹ್ನ 12:45 ಕ್ಕೆ ಪೂರ್ಣಾಹುತಿ ನಂತರ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಮದ್ಯಾಹ್ನ 2:00 ಗಂಟೆಯಿಂದ ಶ್ರೀ ಗೌರಿ ಹಾಗೂ ಗಣೇಶ ದೇವರ ಮೆರವಣಿಗೆ ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ಹೊರಟು ಐನೆಕಿದು, ಕೋಟೆ, ಬಾಳುಗೋಡು ಮಾರ್ಗವಾಗಿ ಹರಿಹರ ಪೇಟೆಗೆ ಬಂದು ಸಂಗಮ ಕ್ಷೇತ್ರದಲ್ಲಿ ಶ್ರೀ ಗೌರಿ ಮತ್ತು ಗಣೇಶ ದೇವರ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುವುದು.

. . . . . .

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!