Ad Widget

ಚೊಕ್ಕಾಡಿ: ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಕಟ್ಟಡಕ್ಕೆ ಶ್ರೀ.ಕ್ಷೇ.ಧ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅನುದಾನ ವಿತರಣೆ

. . . . . . . . .

. . . . . . .

ಚೊಕ್ಕಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಕಟ್ಟಡ ರಚನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಗ್ರಾಮ ಕಲ್ಯಾಣ ಕಾರ್ಯಕ್ರಮದ ಅಡಿಯಲ್ಲಿ ಅನುದಾನ ಮಂಜೂರಾತಿ ಪತ್ರವನ್ನು ಆ.25 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ನಾಗೇಶ್.ಪಿ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಅಮರಪಡ್ನೂರು ಒಕ್ಕೂಟದ ಅಧ್ಯಕ್ಷರಾದ ಪ್ರಸಾದ್ ಶ್ರೇಣಿ, ಪೈಲಾರು ಒಕ್ಕೂಟದ ಅಧ್ಯಕ್ಷರಾದ ನಾರಾಯಣ ಕೋಡ್ತುಗುಳಿ ಹಾಗೂ ಚೊಕ್ಕಾಡಿ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಮತಿ ಪಾರ್ವತಿ ನೇಣಾರು, ಉಪಾಧ್ಯಕ್ಷರಾದ ಶ್ರೀಮತಿ ನಂದಿನಿ, ಕಾರ್ಯದರ್ಶಿ ಶ್ರೀಮತಿ ತುಳಸಿ ಹಾಗೂ ನಿರ್ದೇಶಕರುಗಳು, ಕಟ್ಟಡ ರಚನೆ ಮಾಡಿಕೊಟ್ಟ ಹೇಮನಾಥ ಕೋಡ್ತುಗುಳಿ, ನವಜೀವನ ಸಮಿತಿಯ ಸದಸ್ಯರಾದ ದಾಮೋದರ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ರಾಧಾಕೃಷ್ಣ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೊಡ್ಡತೋಟ ವಲಯ ಮೇಲ್ವಿಚಾರಕರಾದ ಸೀತಾರಾಮ ಕಾನಾವು, ಸೇವಾಪ್ರತಿನಿಧಿಗಳಾದ ಶ್ರೀಮತಿ ಹರ್ಷಿತಾ ಉಪಸ್ಥಿತರಿದ್ದರು.

ವರದಿ :- ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading