ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಪ್ರಾಥಮಿಕ/ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ 2022-23 ನೇ ಸಾಲಿನ ಆಟೋಟ ಸ್ಪರ್ಧೆಯು ಆ.24 ರಂದು ಸರಕಾರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ದಡ್ಡಲಕಾಡು ಇಲ್ಲಿ ನಡೆಯಿತು. ಇಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯದ ನಿರಂತರ ಯೋಗ ಕೇಂದ್ರದ ವಿದ್ಯಾರ್ಥಿ ಮೋನಿಷ್ ತಂಟೆಪ್ಪಾಡಿ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ಇಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ತಂಟೆಪ್ಪಾಡಿ ನಿವಾಸಿ ಟಿ.ವಿಶ್ವನಾಥ ಮತ್ತು ದಯಾಮಣಿ ದಂಪತಿಗಳ ಪುತ್ರ. ಇವರಿಗೆ ಯೋಗಗುರು ಶರತ್ ಮರ್ಗಿಲಡ್ಕ ಮಾರ್ಗದರ್ಶನ ನೀಡಿರುತ್ತಾರೆ.
ವರದಿ :- ಉಲ್ಲಾಸ್ ಕಜ್ಜೋಡಿ