ಕೆಪಿಸಿಸಿ ನಿರ್ದೇಶನದಂತೆ ಸ್ವಾತಂತ್ರ್ಯ ಅಮೃತಮಹೋತ್ಸವದ ಸವಿನೆನಪಿಗಾಗಿ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಆಗಸ್ಟ್ 30ರಂದು ಜಾಲ್ಸೂರಿನಿಂದ ಸುಳ್ಯಕ್ಕೆ ಕಾಲ್ನಡಿಗೆ ಜಾಥಾದೊಂದಿಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಮುಖ ನಾಯಕರ ಸಭೆ ಇಂದು ಸುಳ್ಯದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ರೂಪುರೇಷೆ ಮತ್ತು ಅಭೂತಪೂರ್ವವಾಗಿ ಸಂಘಟಿಸುವ ಬಗ್ಗೆ ಚರ್ಚಿಸಲಾಯಿತು. ಪಿ.ಸಿ ಜಯರಾಮ್ ಮಾತನಾಡಿ, ಪೂ.೧೦ ಗಂಟೆಗೆ ಸ್ವಾತಂತ್ರ್ಯ ನಡಿಗೆ ಜಾಲ್ಸೂರಿನಿಂದ ಉದ್ಘಾಟನೆಗೊಂಡು ಸುಮಾರು 10 ಕಿ.ಮೀ ದೂರ ಸುಳ್ಯ ನಗರಕ್ಕೆ ಸಾಗಿಬಂದು ಸುಳ್ಯ ಖಾಸಗಿ ಬಸ್ಸುನಿಲ್ದಾಣದಬಳಿ ಸಮಾರೋಪ ಗೊಳ್ಳಲಿದೆ. ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಸುಮಾರು 2000ಕ್ಕೂ ಹೆಚ್ಚು ಜನ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಳ್ಳಲಿದ್ದು ಸ್ವಾತಂತ್ರö್ಯ ಅಮೃತಮಹೋತ್ಸವವನ್ನು ಸ್ಮರಣೀಯವಾಗಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು. ವಾಗ್ಮಿ ಮತ್ತು ಚಿಂತಕರಾಗಿರುವ ಸುಧೀರ್ ಕುಮಾರ್ ಮರೋಳಿಯವರು ಸಮಾರೋಪ ಭಾಷಣ ಮಾಡಲಿದ್ದಾರೆ. ಸಭೆಯಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕೆ.ಪಿ.ಸಿ.ಸಿ ಸಂಯೋಜಕ ಕೃಷ್ಣಪ್ಪ, ಕೆ.ಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಎಂ ವೆಂಕಪ್ಪ ಗೌಡ, ಭರತ್ ಮುಂಡೋಡಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್ ಜಯಪ್ರಕಾಶ್ ರೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರು, ಮಾಜಿ ಸಮಾಜ ಕಲ್ಯಾಣ ಮಂಡಳಿ ಅದ್ಯಕ್ಷೆ ಶ್ರೀಮತಿ ದಿವ್ಯಪ್ರಭಾ ಚಿಲ್ತಡ್ಕ, ಕೆ.ಎಂ ಮುಸ್ತಫಾ, ಸುಧೀರ್ ರೈ ಮೇನಾಲ, ವಿಶ್ವನಾಥ ರೈ ಕಳಂಜ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಗೋಕುಲ್ ದಾಸ್, ಸಚಿನ್ ರಾಜ್ ಶೆಟ್ಟಿ, ಮಹೇಶ್ ಭಟ್ ಕರಿಕ್ಕಳ, ಅಬ್ದುಲ್ ಗಫೂರ್ ಕಲ್ಮಡ್ಕ, ಮೊಹಮ್ಮದ್ ಕುಂಞ ಗೂನಡ್ಕ, ಸದಾನಂದ ಮಾವಜಿ, ದಿನೇಶ್ ಅಂಬೆಕಲ್ಲು, ಅಶೋಕ್ ಚೂಂತಾರು,ಇಸ್ಮಾಯಿಲ್ ಪಡ್ಪಿನಂಗಡಿ, ಮಹಮ್ಮದ್ ಪವಾಝ್, ವಿಠಲ್ ದಾಸ್ ಬೆಳ್ಳಾರೆ, ಅನಿಲ್ ರೈ ಬೆಳ್ಳಾರೆ, ಆನಂದ ಬೆಳ್ಳಾರೆ, ಜಯಪ್ರಕಾಶ್ ನೆಕ್ರಪ್ಪಾಡಿ, ಚಂದ್ರಲಿಂಗಂ, ಮೀನಾಕ್ಷಿ ಕುಡೆಕಲ್ಲು, ಬಾಪೂ ಸಾಹೇಬ್ ಅರಂಬೂರು, ಭವಾನಿಶಂಕರ್ ಕಲ್ಮಡ್ಕ ಮೊದಲಾದವರು ಉಪಸ್ಥಿತರಿದ್ದರು.
- Saturday
- November 23rd, 2024