ಸೇವಾಜೆಯ ಶ್ರೀ ಕೃಷ್ಣ ಸಾಂಸ್ಕೃತಿಕ ಸೇವಾ ಸಮಿತಿ ಮತ್ತು ಊರ ಭಕ್ತಾಭಿಮಾನಿಗಳ ಸಹಯೋಗದೊಂದಿಗೆ ೧೭ ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಸೇವಾಜೆ ಶಾಲಾ ವಠಾರದಲ್ಲಿ ಆ.21 ಅದ್ದೂರಿಯಾಗಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಪ್ರಗತಿಪರ ಕೃಷಿಕರಾದ ಚಿನ್ನಪ್ಪ ಗೌಡ ಶೆಟ್ಟಿಮಜಲು ಇವರು ದೀಪ ಬೆಳಗಿಸುವ ಮೂಲಕ ನೆರವೆರಿಸಿದರು.ಬಳಿಕ ಅಂಗನವಾಡಿ ಮಕ್ಕಳಿಗೆ ಮುದ್ದುಕೃಷ್ಣ ವೇಷ ಹಾಗೂ ಶಾಲಾ ಮಕ್ಕಳಿಗೆ ವಿವಿದ ವಿನೊದಾವಳಿಗಳು ನಡೆಯಿತು. ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಲಾಗಿತ್ತು. ವಿಶೇಷವಾಗಿ ಸಾರ್ವಜನಿಕರ ಮ್ಯಾರಾಥಾನ್ ಎಲ್ಲರ ಗಮನ ಸೆಳೆಯಿತು.
ರಾಷ್ಟೀಯ ಯೋಗಪಟು ಮತ್ತು ಇಂಡಿಯನ್ ಬುಕ್ ಆಫ್ ರೆಕಾಡ್ಸ್ ದಾಖಲೆ ಬರೆದ ಕು ದೀಕ್ಷಾ ಎಲಿಮಲೆ ಇವರಿಂದ ಯೋಗ ಪ್ರದರ್ಶನ ನಡೆಯಿತು. ಸಮಾರೊಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಸಾಂಸ್ಕೃತಿಕ ಸೇವಾ ಸಮಿತಿ ಅಧ್ಯಕ್ಷರಾದ ಜಯದೀಪ್ ಕರಂಗಿಲಡ್ಕ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ರಾಷ್ಟೀಯ ಯೋಗಪಟು ಹಾಗೂ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ಇಲ್ಲಿನ ಶಿಕ್ಷಕರಾದ ಶರತ್ ಮರ್ಗಿಲಡ್ಕ, ಸೇವಾಜೆ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರೇಮಲತಾ, ಮರ್ಕಂಜ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ನಾಗವೇಣಿ, ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಲೀಲಾವತಿ ಡಿ, ಶ್ರೀ ಕೃಷ್ಣ ಸಾಂಸ್ಕೃತಿಕ ಸೇವಾ ಸಮಿತಿ ಮಾಜಿ ಅಧ್ಯಕ್ಷರು, ಗೌರವ ಸಲಹೆಗಾರರಾದ ಜಯಾನಂದ ಪಟ್ಟೆ, ಶಾಲಾ ಎಸ್ ಡಿ ಯಂ ಸಿ ಅಧ್ಯಕ್ಷರಾದ ಶಶಿಧರ ಶೆಟ್ಟಿಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು, ಈ ಸಮಾರಂಭದಲ್ಲಿ ಯೋಗಪಟುಗಳಾದ ಶರತ್ ಮರ್ಗಿಲಡ್ಕ, ಕು. ದೀಕ್ಷಾ ಎಲಿಮಲೆ ಇವರನ್ನು ಹಾಗು ಶಾಲಾ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು, ಈ ಸಂದರ್ಭದಲ್ಲಿ ಅದೃಷ್ಟ ಚೀಟಿಯ ಅದೃಷ್ಟವಂತರನ್ನು ಆಯ್ಕೆ ಮಾಡಲಾಯಿತು.
ಪುಟ್ಟರಾಜು ಶೆಟ್ಟಿಮಜಲು ಸ್ವಾಗತಿಸಿ ಜಯಾನಂದ ಪಟ್ಟೆ ವಂದಿಸಿದರು, ಲೋಹಿತ್ ಮಾವಿನಗೊಡ್ಲು ಕಾರ್ಯಕ್ರಮ ನಿರೂಪಿಸಿದರು.