ಬೂಡು ಭಗವತಿ ಯುವ ಸೇವಾ ಸಂಘದ ಆಶ್ರಯದಲ್ಲಿ ಆ.21 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಪ್ರಧಾನ ಕಾರ್ಯದರ್ಶಿಗಳು, ರಾಜ್ಯಒಕ್ಕಲಿಗರ ಸಂಘದ ಅಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ, ಮಹಾಭಾರತದಂತಹ ಪುರಾಣವನ್ನು ಗಮನಿಸಿದಾಗ ಧರ್ಮದರೀತಿಯಲ್ಲಿ ನಡೆದ ಪಾಂಡವರು ಐವರಾದರು ಅವರ ರಕ್ಷಣೆಯ ಹೊಣೆ ಹೊತ್ತವನು ಶ್ರೀಕೃಷ್ಣ ಪರಮಾತ್ಮ ಕೌರವರೂ ಬಹು ಸಂಖ್ಯಾತರಾದರೂ ಅನ್ಯಾಯದ ಮೂಲಕ ಗೆಲುವು ಸಾಧಿಸಲು ಶ್ರೀಕೃಷ್ಣ ಪರಮಾತ್ಮ ಅವಕಾಶ ಕೊಡಲಿಲ್ಲ. ಭಗವದ್ಗೀತೆಯ ಮೂಲಕ ಹಿಂದುಗಳಿಗೆ ಧರ್ಮವನ್ನು ಭೋದಿಸಿರುವ ಇದು ನಮ್ಮಧರ್ಮಗ್ರಂಥವಾಗಿಅದನ್ನು ಅನುಸರಿಸುತ್ತಿದ್ದೇವೆ ಎಂದರು.
ಈ ಸಂಧರ್ಭದಲ್ಲಿ ಶ್ರೀ ಭಗವತಿಯುವ ಸೇವಾ ಸಂಘದ ವತಿಯಿಂದ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾ. ರೇಣುಕಾ ಪ್ರಸಾದ್ ಕೆ.ವಿಯವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಬೂಡು ರಾಧಕೃಷ್ಣರೈ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸುಳ್ಯದ ಉಪವೃತ್ತ ನಿರೀಕ್ಷಕರಾದ ದಿಲೀಪ್ ಜಿ.ಆರ್, ಸುಧಾಕರ ಕುರುಂಜಿಭಾಗ್, ಸದಾಶಿವ ಕೆ, ಶೀಮತಿ ಇಂದಿರಾ ರಾಜಶೇಖರ್, ಆನಂದ ಗೌಡ ಖಂಡಿಗ, ಅರವಿಂದ ಪೂಜಾರಿ, ಕು. ಕವಿತಾ ಬೂಡು, ಮಧುಸೂದನ್ ಬೂಡು ಉಪಸ್ಥಿತರಿದ್ದರು.
- Friday
- November 1st, 2024