ಜಲಶ್ರೀ ಪ್ರತಿಷ್ಠಾನ ಕಡ್ಲಾರು ಸಂಸ್ಥೆಯ ಲೋಗೋ ಬಿಡುಗಡೆ, ದೇಶ ಭಕ್ತಿಗೀತೆಯ ಪೋಸ್ಟರ್ ಬಿಡುಗಡೆ ಹೀಗೆ ವಿವಿಧ ರೀತಿಯ ಸಾಹಿತ್ಯ ಕಾರ್ಯಕ್ರಮಗಳು ಒಂದೇ ವೇದಿಕೆಯಲ್ಲಿ ಹಳೆ ಬೇರು, ಹೊಸ ಚಿಗುರು ಎಂಬ ಹಿರಿಯ ಸಾಹಿತಿಗಳಿಗೆ ಗುರು ಸ್ಥಾನ, ಹೊಸ ಮುಖಗಳಿಗೆ ಅವಕಾಶ ಕೊಟ್ಟು ಅವರನ್ನು ಬೆಳೆಸುವ ಉದ್ದೇಶದಿಂದ ಸಂಘಟಿಸಿದ “ಅಮೃತ ಸಾಹಿತ್ಯೋತ್ಸವ ” ಯಶಸ್ವಿಯಾಗಿ ನಡೆದು ಸಾಹಿತ್ಯಾಭಿಮಾನಿಗಳ ಮನಸೋರೆಗೊಂಡಿತು .
ಹಿರಿಯ ಸಾಹಿತಿಗಳು ಹಾಗೂ ನಿವೃತ್ತ ಸಿ.ಡಿ.ಪಿ. ಓ ನೀರಬಿದಿರೆ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲರಾದ ಬಾಬು ಗೌಡ ಅಚ್ರಪ್ಪಾಡಿ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಕೊರೊನಾ ಸಮಯದಲ್ಲಿ ನಡೆದ ಕಾರ್ಯಕ್ರಮದ “ಆನ್ಲೈನ್ ಭಾಷೆಯ ಪದ ಕವನಗಳ ಗಮ್ಮತ್” ಸಂಪಾದಿತ ಕೃತಿ “ಗಮ್ಮತ್” ಪುಸ್ತಕವನ್ನು ಯೋಗೀಶ್ವರಿಗಾಗಿ ಸಂಪಾದಿಸಿದ್ದಾರೆ. ಕೃತಿಯನ್ನು ನಿವೃತ್ತ ಉಪನ್ಯಾಸಕಿ ಲೀಲಾ ದಾಮೋದರ ಅವರು ಬಿಡುಗಡೆ ಮಾಡಿದರು, ಹಿರಿಯ ಸಾಹಿತಿ ಎ.ಕೆ ಹಿಮಕರ ಕೃತಿ ಪರಿಚಯಿಸಿದರು.
ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ವಿಶ್ವದೀಪ್ ಕುಂಡಲ್ಪಾಡಿ ಅವರನ್ನು ನೆನೆದು ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಜಲಶ್ರೀ ಪ್ರತಿಷ್ಠಾನ ಕಡ್ಲಾರು ಈ ಸಂಸ್ಥೆಯ ಲೋಗೋವನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ಅತಿಥಿಗಳಾಗಿ ವಳಲಂಬೆ ಶಾಲೆ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ಪುರ್ಲುಮಕ್ಕಿ, ಮಾಜಿ ಸೈನಿಕರಾದ ದುಗ್ಗಪ್ಪ ಗೌಡ ಕೊರತ್ತೋಡಿ, ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಜಯಪ್ರಕಾಶ್ ಮೋಂಟಡ್ಕ, ನವಚೇತನ ಯುವಕ ಮಂಡಲ ಬೋಳುಬೈಲು ಇದರ ಅಧ್ಯಕ್ಷರಾದ ಶಶಿಪ್ರಸಾದ್ ಕಾಟೂರು ಹಾಗೂ ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇದರ ಅಧ್ಯಕ್ಷರಾದ ನಿರಂಜನ ಕಡ್ಲಾರು ಇದ್ದರು. ವೇದಿಕೆಯಲ್ಲಿ ಕಿರಣರಂಗ ಅದ್ಯಯನ ಸಂಸ್ಥೆಯ ಅಧ್ಯಕ್ಷರಾದ ಸಾಹಿತಿ ಯೋಗೀಶ್ ಹೊಸೋಳಿಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಯೋಗಗುರು ಶರತ್ ಮರ್ಗಿಲಡ್ಕ ಸ್ವಾಗತಿಸಿ, ವಿನೋದ್ ಮೂಡಗದ್ದೆ ಮತ್ತು ಪ್ರವೀಣ್ ಕಾಟೂರು ಕಾರ್ಯಕ್ರಮ ನಿರೂಪಿಸಿದರು.
ಬಹುಭಾಷಾ ಕವಿಗೋಷ್ಠಿ :-
ತಾಲೂಕು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಜನಾರ್ಧನ ಕಣಕ್ಕೂರು ಇವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು.
ಹಿರಿಯ ಸಾಹಿತಿ ತೇಜಕುಮಾರ್ ಬಡ್ಡಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕಥಾಗೋಷ್ಠಿ ವಿಶಿಷ್ಟ ರೀತಿಯಲ್ಲಿ.
ಪದ್ಮನಾಭ ಸೇವಾ ಕಾರ್ಯಕ್ರಮದ ಬಹುಭಾಷಾ ಕಥಾಗೋಷ್ಠಿಯನ್ನು ನಿರೂಪಿಸಿದರು.
ಸಮಾರೋಪ ಸಮಾರಂಭ :- ನೀರಬಿದಿರೆ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕರೋನಾ ಸಮಯದಲ್ಲಿ ನಡೆದ ಅರೆಭಾಷೆ ಪದ್ಯ ಕವನಗಳ ಗಮ್ಮತ್ ಆನ್‌ಲೈನ್ ಕಾರ್ಯಕ್ರಮದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ ರಮ್ಯಾ ಅಡ್ಕಾರ್ ಮತ್ತು ಪ್ರಾಪ್ತಿ ಗೌಡ ಅರಂತೋಡು ಅವರಿಗೆ ಕಿರಣ ಗೌರವ ಸನ್ಮಾನ ಮಾಡಿ ಗೌರವಿಸಲಾಯಿತು. ಸನ್ಮಾನವನ್ನು ಸಾಹಿತಿ ಹಾಗೂ ವಕೀಲರಾದ ಕೆ.ಆರ್ ವಿದ್ಯಾಧರ ಕುಡೆಕಲ್ಲು ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ನಿರಂಜನ ಕಡ್ಲಾರು ರಚನೆಯ ಅಂಕಿತಾ ಕಡ್ಲಾರು ಹಾಡಿದ ದೇಶ ಭಕ್ತಿಗೀತೆ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ನೀರಬಿದಿರೆ ನಾರಾಯಣ ಅವರು “ನಾವು ಜಗತ್ತಿಗೆ ಬರುವ ಹೆಸರನ್ನು ಉಸಿರಿಸಲಾಗುತ್ತದೆ, ಜಗತ್ತನ್ನು ತೊರೆಯುವಾಗ ಉಸಿರು ಇಡಲಾಗುವುದು. ಅದು ಒಳ್ಳೆಯ ಹೆಸರು ಇರಬಹುದು ಅಥವಾ ಕೆಟ್ಟ ಹೆಸರು ಇರಬಹುದು. ನಮ್ಮ ಹೆಸರು ಸ್ಥಿರಸ್ಥಾಯಿಯಾಗಿ ಉಳಿಯಲು ಕೆಲಸಗಳನ್ನು ಮಾಡಬೇಕು, ಸಾಹಿತ್ಯಗಳನ್ನು ಬರೆಯಬೇಕು, ಇದಕ್ಕಿಂತ ಹೆಚ್ಚಾಗಿ ಒಳ್ಳೆಯ ಮನಸ್ಸನ್ನು ಹೊಂದಿರಬೇಕು ಎಂದ ಅವರು ಒಂದು ಮಹಾ ಯಾತ್ರೆ ಪ್ರಾರಂಭವಾಗುವ ಒಂದು ಪುಟ್ಟ ಹೆಜ್ಜೆಯಿಂದ, ಮಹಾಗ್ರಂಥವು ರೂಪುಗೊಳ್ಳುವ ಒಂದು ಅಕ್ಷರದಿಂದ ನಾವು ಅಕ್ಷರಗಳನ್ನು ಮತ್ತು ಹೆಜ್ಜೆಗಳನ್ನು ಉತ್ತಮ ರೀತಿಯಲ್ಲಿ ಇಡಬೇಕು” ಎಂದು ಹೇಳಿದರು.
ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಪುರೋಹಿತ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಕಿರಣರಂಗ ಅದ್ಯಯನ ಸಂಸ್ಥೆಯ ಅಧ್ಯಕ್ಷರಾದ ಯೋಗೀಶ್ ಹೊಸೊಳಿಕೆ, ಕಲಾಮಾಯೆ ಅಧ್ಯಕ್ಷರಾದ ಸುಧೀರ್ ಏನೆಕಲ್, ಜಲಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ನಿರಂಜನ ಕಡ್ಲಾರು. ಭಾಗವಹಿಸಿದ ಎಲ್ಲಾ ಕವಿಗಳಿಗೆ, ಕಥೆಗಾರರಿಗೆ ಅಭಿನಂದನಾ ಪತ್ರ ಮತ್ತು ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ನಿರಂಜನ ಕಡ್ಲಾರು ಸ್ವಾಗತಿಸಿ, ಶರತ್ ಮರ್ಗಿಲಡ್ಕ ಸನ್ಮಾನಿಸಿದರು. ವಿನೋದ್ ಮೂಡಗದ್ದೆ ಹಾಗೂ ಪ್ರವೀಣ್ ಕಾಟೂರು ಕಾರ್ಯಕ್ರಮ ನಿರೂಪಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ