ದೇವಚಳ್ಳ ಗ್ರಾಮದ ದೇವ ಗೆಳೆಯರ ಬಳಗ,ಜ್ಯೋತಿಲಕ್ಷ್ಮಿ ಮಹಿಳಾಮಂಡಲ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವ, ಅಂಗನವಾಡಿ ಬೆಂಬಲ ಸಮಿತಿ ದೇವ ಇವುಗಳ ಜಂಟಿ ಆಶ್ರಯದಲ್ಲಿ ಆ.18 ರಂದು 32 ನೇ ವರ್ಷದ ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆ ನಡೆಯಿತು. ಊರಿನ ಹಿರಿಯರಾದ ಅಪ್ಪು ಬೆಳ್ಚಪ್ಪಾಡ ರವರು ದೀಪ ಬೆಳಗಿಸುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಪ್ರಯುಕ್ತ ಪುರುಷರಿಗೆ ಮೊಸರು ಕುಡಿಕೆ, ಜಾರುಕಂಬ ಮಹಿಳೆಯರಿಗೆ, ಶಾಲಾ ಮಕ್ಕಳಿಗೆ, ಸಾರ್ವಜನಿಕ ಶಾಲಾ ಮಕ್ಕಳಿಗೆ, ಸ್ಪರ್ಧಾಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಶೇಷವಾಗಿ 5 ವರ್ಷದ ಒಳಗಿನ ಸಾರ್ವಜನಿಕ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಮಧ್ಯಾಹ್ನ ಸುಳ್ಯದ ಎನ್.ಎಮ್.ಸಿ. ಪ್ರಾಂಶುಪಾಲರಾದ ಶ್ರೀಮತಿ ಹರಿಣಿ ಪುತ್ತೂರಾಯ ಧಾರ್ಮಿಕ ಉಪನ್ಯಾಸ ನೀಡಿದರು. ಸಂಜೆ ನಡೆದ ಸಮಾರೋಪ ಸಮಾರಂಭದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷರಾದ ಯೋಗೀಶ್ ದೇವ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಲೋಚನಾ ದೇವ, ಪಂಚಾಯತ್ ಸದಸ್ಯರಾದ ರಮೇಶ ಪಡ್ಪು, ಭವಾನಿಶಂಕರ ಮುಂಡೋಡಿ, ಪ್ರಗತಿಪರ ಕೃಷಿಕರಾದ ವಸಂತ ಕುಮಾರ ಬೊಳ್ಳಾಜೆ, ಜ್ಯೋತಿಲಕ್ಷ್ಮಿ ಮಹಿಳಾ ಮಂಡಲದ ಅಧ್ಯಕ್ಷರಾದ ಕವಿತಾ ಜನಾರ್ಧನ ಕುತ್ಯಾಳ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಜಯಪ್ರಕಾಶ್ ಮುತ್ಲಾಜೆ, ಗೆಳೆಯರ ಬಳಗದ ಕಾರ್ಯದರ್ಶಿ ಉಮೇಶ್ ದೇವ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲತಾ, ಮೊತಿಲಾಲ್ ಓಸ್ವಾಲ್ ಸುಳ್ಯ ಇದರ ಮಾಲಕರಾದ ಮೋಹಿತ್ ನರ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದೇವ ಶಾಲೆಯಲ್ಲಿ 1ರಿಂದ 5 ತರಗತಿಯವರೆಗೆ ಕಲಿತು 2021/ 2022 ರಲ್ಲಿ ಹತ್ತನೆ ಮತ್ತು ದ್ವೀತಿಯ ಪಿ ಯು ಸಿ ಯಲ್ಲಿ 500 ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸ್ಪರ್ಧಾಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತ ರದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎ ಪಿ ಎಂ ಸಿ ಮಾಜಿ ಅಧ್ಯಕ್ಷರಾದ ವಿನಯಕುಮಾರ್ ಮುಳುಗಾಡು, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಕಿಶೋರ್ ಕುಮಾರ್ ಅಂಬೆಕಲ್ಲು, ದೇವಚಳ್ಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿವಾಕರ ಮುಂಡೋಡಿ,ಧರ್ಮಸ್ಥಳ ಗಾಮಭಿವೃದ್ಧಿ ಯೋಜನೆಯ ದೇವ ಒಕ್ಕೂಟದ ಅಧ್ಯಕ್ಷರಾದ ನಳಿನಾಕ್ಷ ಹಿರಿಯಡ್ಕ, ಶೀನಪ್ಪ ಗೌಡ ಪಡ್ಪು, ಊರಿನ ಹಿರಿಯರು,ಗೆಳೆಯರ ಬಳಗದ ಮಾಜಿ,ಹಾಲಿ ಪದಾಧಿಕಾರಿಗಳು ಸರ್ವ ಸದಸ್ಯರುಗಳು, ಜ್ಯೋತಿಲಕ್ಷ್ಮಿ ಮಹಿಳಾ ಮಂಡಲದ ಮಾಜಿ, ಹಾಲಿ ಪದಾಧಿಕಾರಿಗಳು ಸರ್ವ ಸದಸ್ಯರು, ಪಂಚಾಯತ್ ಮಾಜಿ ಸದಸ್ಯರು ಉಪಸ್ಥಿತರಿದ್ದರು.
ಭಾಗವಹಿಸಿದ ಎಲ್ಲರಿಗೂ ಮದ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮವನ್ನು ಕಾರ್ತಿಕ್ ದೇವ ನಿರೂಪಿಸಿದರು ಮುಕುಂದ ಹಿರಿಯಡ್ಕ ಸ್ವಾಗತಿಸಿ,ಉಮೇಶ್ ದೇವ ಧನ್ಯವಾದಗೈದರು.