ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ಚಂದನ ಸಾಹಿತ್ಯ ವೇದಿಕೆ ವತಿಯಿಂದ ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಭವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಕ್ತಿ ಸಂಗೀತ ರಸಮಂಜರಿ ಕಾರ್ಯಕ್ರಮವು ಜರುಗಿತು . ಕಾರ್ಯಕ್ರಮವನ್ನು ಉತ್ತರ ಕರ್ನಾಟಕ ಗೆಳೆಯರ ಬಳಗದ ಅಧ್ಯಕ್ಷರಾದ ಮಂಜುನಾಥ್ ಮೇಸ್ತ್ರಿಯವರು ಉದ್ಘಾಟನೆ ಮಾಡಿದರು.
ಘನ ಅಧ್ಯಕ್ಷತೆಯನ್ನು ಸುಳ್ಯ ಘಟಕದ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬಿ ಕೆ ಉಮಾದೇವಿ ಅವರು ವಹಿಸಿದ್ದರು . ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಗಜೇಂದ್ರಗಡ ಘಟಕದ ಸಂಚಾಲಕರಾದ ಬಿ ಕೆ ಸರೋಜಾ ರವರು ಮತ್ತು ಕೆವಿಜಿ ಇಂಜನೀಯರಿಂಗ್ ಕಾಲೇಜಿನ ಉಪನ್ಯಾಸಕರು , ಸಾಹಿತಿಗಳಾದ ವಿಜಯಕುಮಾರ್ ಕಾಣಿಚಾರ್, ಪತ್ರಕರ್ತ ಹರೀಶ್ ಬಂಟ್ವಾಳ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೊಳಲು ವಾದಕ ವೀಕ್ಷಿತ್ ಮಡಪ್ಪಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು .
ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಗಾಯಕರಾದ ಅಶ್ವಿಜ್ ಆತ್ರೇಯ ಸುಳ್ಯ , ವೈಷ್ಣವಿ ಎಮ್ ಆರ್ ಪುತ್ತೂರು , ಪೂಜಾಶ್ರೀ ಬಳ್ಳಡ್ಕ ಸುಳ್ಯ , ಗಣೇಶ್ ಮಾವಿನಕಟ್ಟೆ , ಪೂರ್ಣಿಮಾ ಪೆರ್ಲಂಪಾಡಿ , ರವಿ ಪಾಂಬಾರ್ , ಮನ್ವಿತಾ ಸುಳ್ಯ , ಗಣೇಶ್ ಚರಣ್ , ಗಣೇಶ್ ಬಾಳಿಗಾ ಬಂಟವಾಳ , ಭಾಗ್ಯಶ್ರೀ ದೇವಿಪ್ರಸಾದ್ , ಭಾಸ್ಕರ್ ಅಡೂರು , ಹರೀಶ್ ಪಂಜಿಕಲ್ಲು , ಚಂದನ್ ಸುಳ್ಯ , ಚಿನ್ಮಯ್ ಸುಳ್ಯ , ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಮತ್ತು ಚೆನ್ನಕೇಶವ ಮಾಸ್ಟರ್ ಸ್ಟುಡಿಯೋ ಇನ್ನಿತರರು ಭಾಗವಹಿಸಿದ್ದರು. ಪ್ರಾರ್ಥನಾ ಗೀತೆಯನ್ನು ಭಾಗ್ಯಶ್ರೀ ಹಾಡಿದರು . ಸ್ವಾಗತ ಭಾಷಣವನ್ನು ಪೂರ್ಣಿಮಾ ಪೆರ್ಲಂಪಾಡಿ ಮಾಡಿದರು .ಕಾರ್ಯಕ್ರಮ ನಿರೂಪಣೆ ಮತ್ತು ವಂದನಾರ್ಪಣೆಯನ್ನು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ರವರು ಮಾಡಿದರು .
ಭಾಗವಹಿಸಿದ ಎಲ್ಲರಿಗೂ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಶ್ರೀಕೃಷ್ಣ ತೂಗುವ ತೊಟ್ಟಿಲನ್ನು ತೂಗಲು ಅವಕಾಶ ನೀಡಲಾಗಿತ್ತು ಮತ್ತು ಎಲ್ಲರಿಗೂ ರಕ್ಷೆಯನ್ನು ಕಟ್ಟಿ ಶುಭ ಹಾರೈಸಿದರು .