
ಗೌಡ ಯುವ ಸೇವಾ ಸಂಘದ ವತಿಯಿಂದ ಅಮರ ಸುಳ್ಯ ಹೋರಾಟಗಾರ ಕೆದಂಬಾಡಿ ಪ್ರತಿಮೆ ಮೆರವಣಿಗೆ ವಿಷಯದ ಬಗ್ಗೆ ಆ. 20 ರಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರ ಕೋಲ್ಚಾರ್,
ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಪ್ರಮುಖ ನಾಯಕ ಕದಂಬಾಡಿ ರಾಮಯ್ಯ ಗೌಡರವರ ಕಂಚಿನ ಪ್ರತಿಮೆಯನ್ನು ಪ್ರತಿಸ್ಟಾಪಿಸುವುದು ಮುಂತಾದ ಕಲಸಕಾರ್ಯಗಳನ್ನು ಸರಕಾರ ಕೈಗೆತ್ತಿಕೊಂಡಿದೆ. ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಈಗಾಗಲೇ ರಾಮಯ್ಯ ಗೌಡರವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲು ಕೆಲಸ ಪೂರ್ಣಗೊಂಡಿದ್ದು ಅಡಿಪಾಯದ ಕಾಮಗಾರಿ ಪೂರ್ಣಗೊಂಡಿದೆ.
ಈಗಾಗಲೇ ಆಂಧ್ರಪ್ರದೇಶದ ವಿಜಯವಾಡದಲ್ಲಿ ಕಂಚಿನ ಪ್ರತಿಮೆ ತಯಾರಾಗಿದ್ದು, ಆಗಸ್ಟ್ 7ರಂದು ಮಂಡ್ಯದ ಆದಿಚುಂಚನಗಿರಿ ಕ್ಷೇತ್ರಕ್ಕೆ ತಲುಪಿ ಅಲ್ಲಿಂದ 28ರಂದು ಶ್ರೀಶ್ರೀಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿಯವರ ಆಶೀರ್ವಾದ ಹಾಗೂ ಮಾರ್ಗದರ್ಶನದಂತ ಬೆಳಿಗ್ಗೆ ಹೊರಟು ಸಂಜೆಗೆ ಮಡಿಕೇರಿಗೆ ತಲುಪಲಿದೆ.
ಆಗಸ್ಟ್ 29ರ ಸೋಮವಾರದಂದು ಪೂ.ಗಂಟೆ 9ಕ್ಕೆ ಸಂಪಾಜೆ ಗೇಟಿನ ಬಳಿಗೆ ಬರುವ ಕೆದಂಬಾಡಿ ರಾಮಯ್ಯ ಗೌಡರವರ ಪ್ರತಿಮೆಯಿರುವ ವಾಹನವನ್ನು ದ.ಕ ಜಿಲ್ಲೆಗೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುತ್ತದೆ. ಈ ಸಂಧರ್ಭದಲ್ಲಿ ದ.ಕ ಜಿಲ್ಲೆಯ ಉಸ್ತುವಾರಿ ಸಚಿವರು, ಸುಳ್ಯದ ಶಾಸಕರು ಸಚಿವರಾಗಿಯೂ, ದ.ಕ ಜಿಲ್ಲೆಯ ಶಾಸಕರು ವಿವಿಧ ಜನಪ್ರತಿನಿಧಿಗಳು ಅಧಿಕಾರಿ ವೃಂದದವರು ಹಾಗೂ ಅಭಿಮಾನಿಗಳು ಸೇರಿದಂತೆ ಸುಮಾರು 300 ಕ್ಕೂ ಮಿಕ್ಕಿದ ವಿವಿಧ ವಾಹನ ಜಾಥದ ಮೂಲಕ ಸ್ವಾಗತಿಸಲಾಗುವುದು. ಈ ಸಂದರ್ಭದಲ್ಲಿ ಪ್ರತಿಮೆಗೆ ಪೂರ್ಣಕುಂಭ ಹಾಗೂ ಬ್ಯಾಂಡ್ ಸೆಟ್ ಮೂಲಕ ಸ್ವಾಗತ ನೀಡಿ ಗಣ್ಯರು ಪುಷ್ಪಾರ್ಚನೆ ಮಾಡಲಿರುವರು. ಸಂಪಾಜೆ ಗೇಟಿನಲ್ಲಿ ಕೊ.ಸಂಪಾಜೆ ಹಾಗೂ ಚೆಂಬು ಹಾಗೂ ದಕ ಸಂಪಾಜೆಯ ಪಂಚಾಯತ್ ಪ್ರತಿನಿಧಿಗಳು, ಸಹಕಾರಿ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಮುಖಂಡರುಗಳು ಸ್ವಾಗತಿಸಿ ಮೆರವಣಿಗೆಯ ಮೂಲಕ ಸಾಗಿ ಬಂದು ಅರಂತೋಡು ಹಾಗೂ ಪೆರಾಜೆಗಳ ಕೇಂದ್ರಗಳಲ್ಲಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಿದ್ದು, 10.30 ಗಂಟೆಗೆ ಸುಳ್ಯಕ್ಕ ಆಗಮಿಸಲಿದೆ. ಗಾಂಧಿನಗರದ ಕಾಯರ್ತೋಡಿ ದೇವಸ್ಥಾನಕ್ಕೆ ತೆರಳುವ ಕೇಂದ್ರದಲ್ಲಿ ವಿಶೇಷವಾಗಿ ಉಬರಡ್ಕ ಮಿತ್ತೂರು ಜನತೆ ಹಾಗೂ ಕದಂಬಾಡಿ ಮನೆತನದವರಿಂದ ವಿಶೇಷ ಸ್ವಾಗತ ನೀಡುವ ಕಾರ್ಯಕ್ರಮವಿದೆ.
ಜನಪ್ರತಿನಿಧಿಗಳು, ಹಾಗೂ ವಿವಿಧ ಗಣ್ಯರು ಪುಷ್ಪಾರ್ಚನೆ ಮಾಡಿ ಸ್ವಾಗತ ಮಾಡಲಿದ್ದಾರೆ.