ರಾಜ್ಯ ಅಲ್ಪಸಂಖ್ಯಾತರ ಕಾಂಗ್ರೇಸ್ ಘಟಕದ ಕಾರ್ಯದರ್ಶಿಯಾಗಿ ಸಂಪಾಜೆ ಗ್ರಾಮ ಪಂಚಾಯತ್ನ ಹಿರಿಯ ಸದಸ್ಯ ಅಬೂಸಾಲಿ ಗೂನಡ್ಕ ಅವರನ್ನು ರಾಷ್ಟ್ರೀಯ ಅಲ್ಪಸಂಖ್ಯಾತ ಕಾಂಗ್ರೇಸ್ ಘಟಕದ ಅಧ್ಯಕ್ಷ ಇಮ್ರಾನ್ ಪ್ರತಾಫ್ ಗರ್ ರವರ ಅನುಮೋದನೆಯೊಂದಿಗೆ ರಾಜ್ಯ ಅಲ್ಪಸಂಖ್ಯಾತ ಕಾಂಗ್ರೇಸ್ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ರವರು ನೇಮಕಗೊಳಿಸಿರುತ್ತಾರೆ. ಅಬೂಸಾಲಿ ಅವರು ಮಡಿಕೇರಿ ಜಿಲ್ಲಾ ಎನ್.ಎಸ್.ಯು.ಐ ನ ಪ್ರಧಾನ ಕಾರ್ಯದರ್ಶಿಯಾಗಿ, ಮಡಿಕೇರಿ ಜಿಲ್ಲಾ ಯುವ ಕಾಂಗ್ರೇಸ್ನ ಪ್ರಧಾನ ಕಾರ್ಯಾದರ್ಶಿಯಾಗಿ ಬ್ಲಾಕ್ ಕಾಂಗ್ರೇಸ್ನ ಸಂಘಟಕನಾ ಕಾರ್ಯದರ್ಶಿಯಾಗಿ, ಮದೆನಾಡು ವಲಯ ಕಾಂಗ್ರೇಸ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ಎರಡು ಬಾರಿ ಮದೆನಾಡು ಗ್ರಾಮ ಪಂಚಾಯತ್ ಸದಸ್ಯರಾಗಿ ಹಾಗೂ ಒಂದು ಅವಧಿಗೆ ಗ್ರಾಮ ಪಂಚಾಯತ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ ಮತ್ತು ಮದೆನಾಡು ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘದ ನಿರ್ಧೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮ ಪಂಚಾಯತ್ನ ೨ ಬಾರಿ ಸದಸ್ಯರಾಗಿ ಪೇರಡ್ಕ ಮುಹಿದ್ದಿನ್ ಜುಮಾಮಸೀದಿ ಹಾಗೂ ಗೂನಡ್ಕ ಬದ್ರಿಯ ಜುಮಾ ಮಸೀದಿಯ ಮಾಜಿ ಕಾರ್ಯದರ್ಶಿಯಾಗಿ , ಸಂಪಾಜೆ ಗ್ರಾಮದ ಗೂನಡ್ಕ ಎಫ್.ವೈ.ಸಿ ಯೂತ್ ಕ್ಲಬ್ನ ಸ್ಥಾಪಕ ಅಧ್ಯಕ್ಷರಾಗಿ, ಸಾಕ್ಷಾರತ ಕಾವೇರಿ ಸಂಪನ್ಮೂಲ ವ್ಯಕ್ತಿಯಾಗಿ,ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಾಗಿ, ಮಾದರಿ ಕ್ರಷಿಕನಾಗಿ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಸಾಮಾಜಿಕ ಹಾಗೂ ರಾಜಕೀಯ ಮುಖಂಡರಾಗಿದ್ದಾರೆ.
ಇವರ ನೇಮಕಕ್ಕೆ ಕಾಂಗ್ರೇಸ್ ಮುಖಂಡರಾದ ಕೆ.ಪಿ.ಸಿ.ಸಿ ಯ ಟಿ.ಎಂ ಶಾಹೀದ್ ತೆಕ್ಕಿಲ್ ಹಾಗೂ ರಾಜ್ಯ ಮಾನವ ಹಕ್ಕುಗಳ ಮತ್ತು ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ನವರು ಅಭಿನಂದಿಸಿದರು. ಬೆಂಗಳೂರಿನ ಕೆ.ಪಿ.ಸಿ.ಸಿ ಕಚೇರಿಯಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ರವರು ಅಬುಸಾಲಿಯವರಿಗೆ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಿದರು, ಈ ಸಂಧರ್ಭದಲ್ಲಿ ಟಿ.ಎಂ ಶಾಹೀದ್ ತೆಕ್ಕಿಲ್, ಯುವ ಕಾಂಗ್ರೇಸ್ ಮುಖಂಡ ಅಯ್ಯೂಬ್ ಗೂನಡ್ಕ ಉಪಸ್ಥಿತರಿದ್ದರು.
- Sunday
- November 24th, 2024