Ad Widget

ತಾಯಿಯ ಆಸೆ ಇಡೇರಿಸಲು ತಂದೆ ನೀಡಿದ ಸ್ಕೂಟರ್ ನಲ್ಲಿ ದೇಶ ಸುತ್ತಿಸುತ್ತಿರುವ ಮಗ – ಕುಕ್ಕೆ ಸುಬ್ರಹ್ಮಣ್ಯ ಭೇಟಿ

. . . . . . . . .

ಸಾಮಾನ್ಯವಾಗಿ ಮಕ್ಕಳು ಪ್ರವಾಸ, ಸುತ್ತಾಟ, ದೂರ ಸಂಚಾರಕ್ಕೆ ತಮ್ಮ ಸ್ನೇಹಿತರು, ತಮ್ಮ ಒಡನಾಡಿಗಳೊಂದಿಗೆ ತೆರಳಿ ಸಂಭ್ರಮಿಸುವುದು ಪ್ರಸ್ತುತ ದಿನದಲ್ಲಿ ನಾವು ಕಾಣುತ್ತೇವೆ. ಆದರೆ ಮೈಸೂರಿನ ಈ ಯುವಕನೊಬ್ಬ ತನ್ನ ತಾಯಿಯೊಂದಿಗೆ ದೇಶ ಸುತ್ತುತ್ತಾ ತೀರ್ಥಯಾತ್ರೆ ಮಾಡುತ್ತಿದ್ದು, ಇದೀಗ ದ.ಕ.ಜಿಲ್ಲೆಯ ಯಾತ್ರೆಯಲ್ಲಿದ್ದಾರೆ.

. . . . . . .

ಮೈಸೂರಿನ ಕೃಷ್ಣಕುಮಾರ್(44) ಹಾಗೂ ಅವರ ತಾಯಿ ಚೂಡ ರತ್ಮಮ್ಮ (72) ಎಂಬವರು ಜೊತೆಯಾಗಿ ಸ್ಕೂಟರ್ ಒಂದರಲ್ಲಿ ಸುತ್ತಾಟದಲ್ಲಿ ತೊಡಗಿದ್ದಾರೆ. ಸದ್ಯ ಇವರು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಆಗಮಿಸಿದ್ದಾರೆ. ಕೃಷ್ಣ ಕುಮಾರ್ ಅವರು ಉದ್ಯೋಗದಲ್ಲಿದ್ದು, ಕೆಲ ವರ್ಷಗಳ ಹಿಂದೆ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ. ಅವಿವಾಹಿತರಾಗಿರುವ ಕೃಷ್ಣ ಕುಮಾರ್ ತಮ್ಮ ತಾಯಿಯ ಜತೆ ಜೀವನ ಕಳೆಯುತ್ತಿದ್ದು, ತಾಯಿಯ ಆಸೆಗಳನನ್ನು ಈಡೇರಿಸುತ್ತಿದ್ದಾರೆ. ಅದಕ್ಕಾಗಿಯೇ ತಾಯಿ ಆಸೆ ಪಡುವ ಕಡೆಗಳಿಗೆ ಕೃಷ್ಣ ಕುಮಾರ್ ಕರೆದೊಯ್ಯುತ್ತಿದ್ದಾರೆ.

2018ರಲ್ಲಿ ಮೈಸೂರಿನಿಂದ ಈ ತಾಯಿ, ಮಗ ಸುತ್ತಾಟ ಆರಂಭಿಸಿ ಬಹುತೇಕ ಭಾರತವನ್ನು ಸುತ್ತಿದ್ದಾರೆ. ಬಳಿಕ ನೇಪಾಳ, ಭೂತನ್, ಮಾಯನ್ಮಾರ್ ದೇಶಗಳಲ್ಲೂ ತಿರುಗಾಟ ನಡೆಸಿ ತಾಯಿಯ ಇಚ್ಚೆಯಂತೆ ನಡೆಸಿಕೊಂಡಿದ್ದಾರೆ. ಬಳಿಕ ಕೊರೊನಾ ಬಂದ ಪರಿಣಾಮ ಮೈಸೂರಿಗೆ 2020ರಲ್ಲಿ ಮತ್ತೆ ಮೈಸೂರಿಗೆ ಹಿಂದುರಿಗಿದ್ದು, ಬಳಿಕ ಸ್ಥಳೀಯವಾಗಿ ಸುತ್ತಾಟ ನಡೆಸುತ್ತಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading