Ad Widget

ದಿ|ಶೀಂಟೂರು ನಾರಾಯಣ ರೈ ಅವರ ಸ್ಮರಣೆಯ ‘ಶೀಂಟೂರು ಸ್ಮೃತಿ’ ಕಾರ್ಯಕ್ರಮ

ನಿವೃತ್ತ ಸೇನಾನಿ, ಶಿಕ್ಷಕ ದಿ|ಶೀಂಟೂರು ನಾರಾಯಣ ರೈ ಅವರ ಸ್ಮರಣೆಯ ‘ಶೀಂಟೂರು ಸ್ಮೃತಿ’ ಕಾರ್ಯಕ್ರಮವು ಆ.13ರಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ನಾರಾಯಣ ರೈ ಅವರ ದೂರದೃಷ್ಟಿಯ ಫಲವಾಗಿ ಇಂದು ವಿದ್ಯಾಸಂಸ್ಥೆ ಬೆಳೆದು ಹೆಮ್ಮರವಾಗಿದ್ಜರಿಂದ ಗ್ರಾಮೀಣ ಭಾಗದ ಅನೇಕ ಯುವಕರು ವಿದ್ಯಾವಂತರಾಗಿದ್ದಾರೆ. ಇಂತಹ ಹಿರಿಯರ ಬದುಕಿನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಉತ್ತಮ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಮಾಡಬೇಕು. ನಾರಾಯಣ ರೈ ಅವರ ಆಶಾದಾಯಕದಂತೆ ಅವರ ಪುತ್ರ ಸವಣೂರು ಸೀತಾರಾಮ ರೈ ಅವರು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗಿದೆ ಎಂದರು.ಹಾಗೆಯೇ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಬೇಕು, ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದೂರವಿರಬೇಕು ಎಂದು ಹೇಳಿದರು.

. . . . . . .

ನಂತರ ಮಾತನಾಡಿದ ಜಿಲ್ಲಾ ನಿವೃತ್ತ ಆರೋಗ್ಯಾಧಿಕಾರಿ ಡಾ.ಎಸ್.ರಂಗಯ್ಯ ಪ್ರಧಾನ ಭಾಷಣ ಮಾಡಿ, ನಾರಾಯಣ ರೈ ಅವರ ಶಿಸ್ತುಬದ್ಧ ಜೀವನ ಮತ್ತು ಆದರ್ಶತೆ ನಮ್ಮಬದುಕಿಗೆ ಪ್ರೇರಣೆಯಾಗಬೇಕು. ದೇಶ ಸೇವಾ ನಂತರ ನಾರಾಯಣರವರು ವಿದ್ಯಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದರ ಹಿಂದೆ ಶೈಕ್ಷಣಿಕ ಕ್ರಾಂತಿಯ ಉದ್ದೇಶವಿತ್ತು. ಅವರ ದೂರದೃಷ್ಠಿಯ ವಿಚಾರವನ್ನು ಅವರ ಪುತ್ರ ಸೀತಾರಾಮ ರೈ ಅವರು ಕಾರ್ಯಗತಗೊಳಿಸುತ್ತಿರುವುದು ಉತ್ತಮ ವಿಚಾರ ಎಂದರು. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈಯವರು ಕಾಠ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಎಲ್ಲರನ್ನು ಸ್ವಾಗತಿಸಿ ಮಾತನಾಡಿ ಸವಣೂರಿನಲ್ಲಿ ವಿದ್ಯಾ ಸಂಸ್ಥೆ ಸ್ಥಾಪನೆಗೆ ನನ್ನ ತಂದೆ ನಾರಾಯಣ ರೈ ಅವರೇ ಪ್ರೇರಣೆಯಾಗಿದ್ದಾರೆ.ವರ್ಷಂಪ್ರತಿ ಅವರ ಹೆಸರಿನಲ್ಲಿ ವಿದ್ಯಾರ್ಥಿ ವೇತನ,ಒಂದು ವರ್ಷ ನಿವೃತ್ತ ಸೈನಿಕರಿಗೆ,ಇನ್ನೊಂದು ವರ್ಷ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಇದ್ದೇವೆ ಎಂದರು.ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಎಸ್‌ಎನ್‌ ಆರ್ ರೂರಲ್ ಎಜ್ಯುಕೇಷನ್‌ ಟ್ರಸ್ಟ್‌ನ ಟ್ರಸ್ಟಿಗಳಾದ ಸವಣೂರು ಸುಂದರ ರೈ, ರಶ್ಮಿ ಅಶ್ವಿನ್ ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಡಾ|ನಾರಾಯಣ ಮೂರ್ತಿ ಕೆ, ನಿಕಟಪೂರ್ವ ಪ್ರಿನಿಪಾಲ್ ರಾಜಲಕ್ಷ್ಮೀ ರೈ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶೀಂಟೂರು ನಾರಾಯಣ ರೈ ಪ್ರತಿಷ್ಠಾನದ ವತಿಯಿಂದ ಹತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.ಸಮ್ಯಕ್‌ ಜೈನ್ ಹಾಗೂ ಪರ್ಷಿತ್ ಕೆ.ಡಿ ಸನ್ಮಾನಿತರ ಪರಿಚಯ ಮಾಡಿದರು. ವಿದ್ಯಾರ್ಥಿಗಳು ಶೀಂಟೂರು ನಾರಾಯಣ ರೈ ಕುರಿತ ಹಾಡು ಹಾಡಿದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಯಪಾಲ ಸೀತಾರಾಮ ಕೇವಳ ವಂದಿಸಿದರು. ತೃತೀಯ ಬಿ.ಎ. ವಿದ್ಯಾರ್ಥಿನಿ ಅನುಶ್ರೀ ಎಚ್.ಎಲ್ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!