ಹಟ ಮಾಡುತ್ತಿದ್ದ ನಾಲ್ಕು ವರ್ಷ ಪ್ರಾಯದ ಮಗುವಿಗೆ ತಾಯಿಯೇ ಸಟ್ಟುಗ ಬಿಸಿ ಮಾಡಿ ಬರೆ ಹಾಕಿದ ದಾರುಣ ಘಟನೆ ಸುಳ್ಯದ ನಾವೂರಿನಿಂದ ವರದಿಯಾಗಿದೆ.ಆರು ದಿನಗಳ ಹಿಂದೆ ಈ ಘಟನೆ ನಡೆದಿದೆಯೆನ್ನಲಾಗಿದ್ದು ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ಸಿ.ಡಿ.ಪಿ.ಒ. ರಶ್ಮಿ ನೆಕ್ರಾಜೆಯವರು ಆ ಮನೆಗೆ ಧಾವಿಸಿ ಪರಿಶೀಲಿಸಿದರು. ಬಳಿಕ ಮಗುವನ್ನು ಸಿ.ಡಿ.ಪಿ.ಒ. ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತೆಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಸಿಗಬೇಕಾಗಿದೆ.
- Friday
- November 22nd, 2024