Ad Widget

ಕೆ. ವಿ. ಜಿ. ದಂತ ಮಹಾವಿದ್ಯಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ

ಕೆ.ವಿ.ಜಿ ದಂತ ಮಹಾವಿದ್ಯಾಲಯದಲ್ಲಿ ಆ. 16 ರಂದು ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು. ಎಸ್.ಆರ್. ರಂಗನಾಥನ್ ರವರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಪಿತಾಮಹರಾಗಿದ್ದು, ಅವರ ಹುಟ್ಟು ಹಬ್ಬದ ಪ್ರಯುಕ್ತ ಪ್ರತಿ ವರ್ಷ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಗುತ್ತಿತು.

. . . . .

ಕಾರ್ಯಕ್ರಮವನ್ನು ದೀಪ ಬೆಳಗುವುದರೊಂದಿಗೆ ಆರಂಭಗೊಂಡಿತು. ಕೆ.ವಿ.ಜಿ ದಂತ ಮಹಾವಿದ್ಯಾಲಯದ ಪ್ರಾಂಸುಪಾಲರಾದ ಡಾ. ಮೋಕ್ಷಾ ನಾಯಕ್ ಗ್ರಂಥಾಲಯದ ಮಹತ್ವ ಮತ್ತು ವಿದ್ಯಾರ್ಥಿಗಳು ಗ್ರಂಥಾಲಯವನ್ನು ಸದುಪಯೋಗ ಮಾಡಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾದ ಕೆ.ವಿ.ಜಿ ತಾಂತ್ರಿಕ ಮಹಾವಿದ್ಯಾಲಯದ ಮುಖ್ಯ ಗ್ರಂಥಪಾಲಕ ಸೀತಾರಾಮ ಪಿ.ಬಿ ರವರು ಎಸ್. ಆರ್. ರಂಗನಾಥನ್ ಅವರು ಬೆಳೆದು ಬಂದ ದಾರಿ ಮತ್ತು ಅವರ ಸಾಧನೆಗಳಾದ, 1966 ರ ಕರ್ನಾಟಕ ಪಬ್ಲಿಕ್ ಲೈಬ್ರೆರಿ ಆಕ್ಟ್, ಗ್ರಂಥಾಲಯಗಳ ಅಬ್ಯುದಯತೆ ಪಂಚ ಸೂತ್ರವನ್ನು ಮತ್ತು ಪುಸ್ತಕಗಳ ವರ್ಗೀಕರಣಕ್ಕೆ ಸುಲಭ ವಿಧಾನಗಳನ್ನು ಅಳವಡಿಸಲು ಮುಖ್ಯ ಪಾತ್ರವಹಿಸಿದರು ಎಂದು ವಿವರಿಸಿದರು.

ಕೆ.ವಿ.ಜಿ ದಂತ ಮಹಾವಿದ್ಯಾಲಯದ ಗ್ರಂಥಾಲಯ ಸಮಿತಿ ಸಂಚಾಲಕರಾದ ಡಾ. ಶರತ್ ಕುಮಾರ್ ಶೆಟ್ಟಿ, ವಕ್ರದಂತ ವಿಭಾಗ ಮುಖ್ಯಸ್ಥರು, ಗ್ರಂಥಪಾಲಕರ ದಿನಾಚರಣೆಯ ಶುಭಕೋರಿದರು. ಹಾಗೂ ಗ್ರಂಥಾಲಯ ಸಮಿತಿಯ ಸದಸ್ಯರಾದ ಡಾ. ಎಲ್. ಕೃಷ್ಣಪ್ರಸಾದ್ ದಂತ ಸಂರಕ್ಷಣೆ ವಿಭಾಗ ಮುಖ್ಯಸ್ಥರು ಇ-ಲೈಬ್ರೆರಿಗಳ ಬಳಕೆಯ ಬಗ್ಗೆ ಪ್ರೇರೇಪಿಸಿದರು.

ಗ್ರಂಥಪಾಲಕರ ದಿನಾಚರಣೆಯ ಪ್ರಯುಕ್ತ ಉತ್ತಮ ಗ್ರಂಥಾಲಯ ಬಳಕೆ ಮಾಡುವ ವಿದ್ಯಾರ್ಥಿ ಗಗನ್ ಗೋಪಾಲ್ ಜಿ. ಇವರಿಗೆ ಸ್ಮರಣೀಕೆ ನೀಡಿ ಗೌರವಿಸಿದರು. ಕೆ.ವಿ.ಜಿ ದಂತ ಮಹಾವಿದ್ಯಾಲಯದ ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಆಡಳಿತಾಧಿಕಾರಿ, ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಕು. ಅನನ್ಯ ಪ್ರಾರ್ಥಿಸಿದರು, ಮುಖ್ಯ ಗ್ರಂಥಪಾಲಕಿ ಶ್ರೀಮತಿ. ಪೂರ್ಣಿಮ ಸ್ವಾಗತಿಸಿದರು. ವಿದ್ಯಾರ್ಥಿ ಕು.ಅನಘ ವಂದಿಸಿದರು ಮತ್ತು ಸಹಾಯಕ ಗ್ರಂಥಪಾಲಕ, ಚೇತನ್ ಅಮೆಮನೆ ಕಾರ್ಯಕ್ರಮ ನಿರೂಪಿಸಿದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!