Ad Widget

ಆ.18 ರಂದು ಬೊಳುಬೈಲಿನಲ್ಲಿ 28ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ

ಬೊಳುಬೈಲು ನವಚೇತನ ಯುವಕ ಮಂಡಲ ಇದರ ವತಿಯಿಂದ 28ನೇ ವರುಷದ ಶ್ರೀಕೃಷ್ಣ ಜನ್ಮಾಷ್ಣಮಿಯು ಆ. 18 ರಂದು ಗುರುವಾರದಂದು ಬೊಳುಬೈಲು ನವಚೇತನ ಮೈದಾನದಲ್ಲಿ ನಡೆಯಲಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಶಿವರಾಮ ಗೌಡ ನಡುಬೆಟ್ಟು ನೆರವೆರಿಸಲಿದ್ದಾರೆ.

. . . . . .

ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಶಶಿಪ್ರಸಾದ್ ಕಾಟೂರು ವಹಿಸಲಿದ್ದಾರೆ. ವೇದಿಕೆಯಲ್ಲಿ ನವಚೇತ‌ನ ಚಿಣ್ಣರ ಕೂಟದ ಅಧ್ಯಕ್ಷ ಮೊಕ್ಷೀತ್ ಆರ್ಭಡ್ಕ ಭಾಗವಹಿಸಲಿದ್ದಾರೆ. ನಂತರ ಸಾರ್ವಜನಿಕರಿಗೆ ವಿವಿದ ಆಟೋಟ ಸ್ವರ್ಧೆಗಳು ನಡೆಯಲಿದೆ.ಸಂಜೆ 5ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕಮಂಡಲದ ನಿಕಟಪೂರ್ವ ಅಧ್ಯಕ್ಷ ಸುಧೀರ್ ನೆಕ್ರಾಜೆ ವಹಿಸಲಿದ್ದಾರೆ.

ಪ್ರಮುಖ ಭಾಷಣಕಾರರಾಗಿ ವಿಧಾನ ಪರಿಷತ್ತು ಮಾಜಿ ಶಾಸಕರಾದ ಅಣ್ಣಾ ವಿನಯಚಂದ್ರ,ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಿನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವರಾದ ಎಸ್ ಅಂಗಾರ, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಸುಳ್ಯ ಇದರ ಅಧ್ಯಕ್ಷ ಚಿದಾನಂದ ವಿದ್ಯಾನಗರ, ಗ್ರಾಮ ಪಂಚಾಯತ್ ಜಾಲ್ಸೂರು ಇದರ ಅಧ್ಯಕ್ಷ ಕೆ.ಎಂ ಬಾಬು, ಕನಕಮಜಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕಾಟೂರು ಗೌರವ ಉಪಸ್ಥಿತರಿರುವರು. ಯುವಕ ಮಂಡಲದ ಅಧ್ಯಕ್ಷ ಶಶಿಪ್ರಸಾದ್ ಕಾಟೂರು ಭಾಗವಹಿಸಲಿದ್ದಾರೆ.

ಸಭಾ ವೇದಿಕೆಯಲ್ಲಿ ಮಾಜಿ ಸೈನಿಕ ಕ್ಯಾ. ಜನಾರ್ಧನ ರಾವ್ ಬೈತಡ್ಕ ಮತ್ತು ಲೀಫ್ ಆರ್ಟ್ ಕಲಾವಿದ ಶಶಿಕಾಂತ್ ಅಡ್ಕಾರು ಅವರಿಗೆ ನವಚೇತನ ಗೌರವ ಸನ್ಮಾನ, 2021-2022ರ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯುನ್ನತ ಅಂಕ ಗಳಿಸಿದ ಕು.ಬಿಂದಿಯಾ ಕಾಟೂರು ಅವರಿಗೆ ನವಚೇತನ ಪ್ರತಿಭಾ ಪುರಸ್ಕಾರ ನಡೆಯಲಿದೆ.ಸಭಾ ಕಾರ್ಯಕ್ರಮ ನಂತರ ಇಂಡಿಯ ಬುಕ್ ಆಪ್ ರೆಕಾರ್ಡ್ ,ನೋಬೆಲ್ ವಲ್ಡ್ ರೆಕಾರ್ಡ್ ಮಾಡಿದ ಸಾಧಕ ,ಯೋಗ ಪಟು ಮಾ. ಮೋನಿಷ್ ತಂಟೆಪ್ಪಾಡಿ‌ ಇವರಿಂದ ಯೋಗ ಪ್ರದರ್ಶನ, ನವಚೇತನ ಚಿಣ್ಣರಕೂಟದ ಕಲಾವಿದರಿಂದ ಜಾನಪದ ನೃತ್ಯ ವೈಭವ, ಕಲಾಮಾಯೆ ಫಿಲ್ಮ್ ಪ್ರಸ್ತುತಪಡಿಸುವ, ಶ್ರೀ ಟೆಕ್ನಾಲಜೀಸ್ ಸುಳ್ಯ ಅರ್ಪಿಸುವ ಸುಧೀರ್ ಏನೆಕಲ್ಲು ನಿರ್ದೇಶನದ ಅರೆಭಾಷೆ ಚಲನಚಿತ್ರ ಕೇಸ್ ಪುಸ್ಕ, ಮತ್ತು ವಿಜ್ಜು ವಿಠಲ್ ಸುಳ್ಯ ನಿರ್ಮಾಣದ ಗಿರೀಶ್ ಬೈತಡ್ಕ ನಿರ್ದೇಶನದ ಮಾಯ ಕಿರು ಚಲನಚಿತ್ರಗಳ‌‌ ಪ್ರದರ್ಶನ ನಡೆಯಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!