ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಲಾಮಾಯೆ (ರಿ ) ಏನೆಕಲ್ ಸಂಸ್ಥೆಯ” ಡ್ಯಾನ್ಸ್ ಒನ್ ಟು ತ್ರಿ ” ವಿದ್ಯಾರ್ಥಿಗಳಿಂದ “ಅಮೃತ ವೇದಿಕೆ” ಪ್ರತಿಭಾ ಪ್ರದರ್ಶನ -2022 ಕಾರ್ಯಕ್ರಮ ಆ.14 ರಂದು ಶ್ರೀ ಆದಿಶಕ್ತಿ ಭಜನಾ ಮಂದಿರ ಬಾಲಾಡಿ ಇಲ್ಲಿ ನಡೆಯಿತು.
ಬಾಲಾಡಿ ಭಜನಾ ಮಂದಿರದ ಅಧ್ಯಕ್ಷರಾದ ಗಿರಿಯಪ್ಪ ಗೌಡ ಬಾಲಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಮಾಜಿ ಸುಭೆದಾರ್ ವಾಸುದೇವ ಗೌಡ ಬಾನಡ್ಕ ಪ್ರತಿಭೆ, ಪ್ರಗತಿ, ಮತ್ತು ದೇಶಾಭಿಮಾನ ವಿಚಾರ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ನಿವೃತ್ತ ಸೈನಿಕ ಹರಿಶ್ಚಂದ್ರ ಪರಮಲೆ, ಸುಬ್ರಮಣ್ಯ ಗ್ರಾಮ ಪಂಚಾಯತ್ ಸಿಬ್ಬಂದಿ ರಾಮಚಂದ್ರ ಪರಮಲೆ, ನೃತ್ಯ ನಿರ್ದೇಶಕಿ ಹರ್ಷಿಣಿ ಕೆ. ಕೆ, ನಟಿ ಸೌಂದರ್ಯ ಮರ್ದಾಳ ಉಪಸ್ಥಿತರಿದ್ದರು. ಚಿತ್ರಾವತಿ. ಟಿ ಸ್ವಾಗತಿಸಿ ವಂದಿಸಿದರು. ಕಲಾಮಾಯೆ ಸುಧೀರ್ ಏನೆಕಲ್ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳು ದೇಶಭಕ್ತಿಗೀತೆ, ಏಕ ಪಾತ್ರ ಅಭಿನಯ ಭಾಷಣ ನೃತ್ಯ ದ ಮೂಲಕ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಿದರು. ನಂತರ ತಂಡದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಪೋಷಕರು ಹಾಜರಿದ್ದು ಕಾರ್ಯಕ್ರಮ ಯಶಸ್ವಿ ಗೊಳಿಸಿದರು.