Ad Widget

ಯಾರಿಗೆ ಬಂತು ?ಎಲ್ಲಿಗೆ ಬಂತು !ನಲವತ್ತೇಳರ ಸ್ವಾತಂತ್ರ್ಯ ?

ನಾವು ಸ್ವಾತಂತ್ರ್ಯದ ಅಮೃತಮಹೋತ್ಸವದಲ್ಲಿದ್ದೇವೆ 75 ಸಂವತ್ಸರಗಳನ್ನು ಪೂರೈಸಿದ್ದೇವೆ ಈ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಾನೀಯರು ವೀರವನಿತೆಯರು ವೀರ ಪುರುಷರು ತಮ್ಮ ಜೀವವನ್ನು, ತಮ್ಮ ಕುಟುಂಬವನ್ನು ಬಲಿಕೊಟ್ಟು, ನಮ್ಮ ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನವಾಗಿ ನೀಡಿದ್ದಾರೆ. ಬಿಸಿ ರಕ್ತವನ್ನು ನಮಗಾಗಿ ನಮ್ಮ ದೇಶಕ್ಕಾಗಿ ಅರ್ಪಿಸಿದ್ದಾರೆ ಅದರ ಮೌಲ್ಯವನ್ನು ನಾವಿಂದು ವಿಮರ್ಶೆ ಮಾಡಬೇಕಿದೆ ಇಂದು ನಾವೆತ್ತ ಈ ಸ್ವಾತಂತ್ರ್ಯವನ್ನು ಕೊಂಡೊಯ್ಯುತ್ತೇವೆ ಎಷ್ಟರ ಮಟ್ಟಿಗೆ ಅವರ ಪ್ರಾಣ ತ್ಯಾಗವನ್ನು ಅರ್ಥೈಸಿದೆವೆಂದು ತಿಳಿಯಬೇಕಿದೆ. ಗಾಂಧೀಜಿ ಕೊಟ್ಟ ಅಹಿಂಸಾ ಮಾರ್ಗವನ್ನು ಶಾಂತಿ, ಪ್ರೀತಿ ಮಾನವೀಯತೆಯ ಹಾದಿಯನ್ನು ನಾವಿಂದು ತುಳಿಯುತ್ತಿದ್ದೇವೆ. ಪರಸ್ಪರ ದ್ವೇಷ ಕ್ರೌರ್ಯ ಮತಾಂಧತೆ ಇತ್ಯಾದಿಗಳನ್ನು ಮೈಗೂಡಿಸಿ ಕೊಂಡಿದ್ದೇವೆ.

. . . . . .

ನಮ್ಮಲ್ಲಿ ಪರಸ್ಪರ ಸೌಹಾರ್ದತೆ ಇಲ್ಲವಾಗಿದೆ. ಗಾಂಧಿ ಹುಟ್ಟಿದ ನಾಡಿನಲ್ಲಿ ಇದೆಂತಹ ಕ್ರೌರ್ಯ ನಮ್ಮ ನಾಡು ಶಾಂತಿಯ ನಾಡು, ಸರ್ವ ಜನಾಂಗದ ಶಾಂತಿಯ ಬೀಡು,ಇಂದು ನಾವು ತುಳಿಯುತ್ತಿದ್ದೇವೆ. ಪರಸ್ಪರ ದ್ವೇಷ ಕ್ರೌರ್ಯ ಮತಾಂಧತೆ ಇತ್ಯಾದಿಗಳನ್ನು ಮೈಗೂಡಿಸಿಕೊಂಡಿದ್ದೇವೆ. ನಮ್ಮಲ್ಲಿ ಸೌಹಾರ್ದತೆ ಇಲ್ಲವಾಗಿದೆ. ಗಾಂಧಿ ಹುಟ್ಟಿದ ನಾಡಿನಲ್ಲಿ ಇದೆಂತಾ ಕ್ರೌರ್ಯ, ನಮ್ಮ ನಾಡು ಶಾಂತಿಯ ನಾಡು ಸರ್ವ ಜನಾಂಗದ ಶಾಂತಿಯ ಬೀಡು ಇಂದು ನಾವು ಹೋಗುತ್ತಿರುವ ಮಾರ್ಗವಾದರೂ ಯಾವುದು? ಧರ್ಮ ಎಂಬ ಮೂಲಭೂತವಾದ ನಮ್ಮಲ್ಲಿ ಒಳಹೊಕ್ಕಿದೆ. ಆ ಮತಾಂಧತೆಯೇ ಇಂದು ಅಶಾಂತಿ ಹಿಂಸೆ, ಗಲಭೆಗಳಿಗೆ ಕಾರಣವಾಗಿದೆ ನಾವು ಇಂದು ಹೀಗೆ ಪರಸ್ಪರ ದ್ವೇಷಿಸುತ್ತಿದ್ದರೆ ಮುಂದಿನ ಯುವಜನತೆಗೆ, ಮುಂದಿನ ಪೀಳಿಗೆಗೆ ಕೊಡುವುದಾದರೂ ಏನು? ಬ್ರಿಟಿಷರು ಭಾರತವನ್ನು ಆಳಲು ದೇಶವನ್ನು ಇಬ್ಬಾಗ ಮಾಡಲು ಒಡೆದು ಆಳುವ ನೀತಿಯನ್ನು ಅನುಸರಿಸಿದರು. ಆದರೆ ಇಂದು ನಮ್ಮ ದೇಶ ನಾಶವಾಗಲು ನಾವೇ ಇಂದು ಈ ನೀತಿಯ ಪಾಲಕರಾಗಿದ್ದೇವೆ ಇದಕ್ಕೆ ಪ್ರಮುಖ ಜವಾಬ್ದಾರಿ ರಾಜಕೀಯ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ಈ ದಾರಿ ಹಿಡಿಯುತ್ತಿರುತ್ತಿರುವುದು ಕೆಲವು ಮೂಲಭೂತವಾದಿಗಳು ಪ್ರಮುಖ ಕಾರಣಕರ್ತರು ರಕ್ಷಣೆಯ ನೆಪ ಮಾಡಿಕೊಂಡು ದೇಶಕ್ಕೆ ಅಶಾಂತಿಯ ಬಣ್ಣವನ್ನು ಬಳೆಯುತ್ತಿದ್ದಾರೆ.

ಇನ್ನೊಂದು ಕರಾಳ ಮುಖ ಭ್ರಷ್ಟಾಚಾರ ಇಂದು ನಾವು ಭ್ರಷ್ಟಾಚಾರಿಗಳ ಯುಗದಲ್ಲಿದ್ದೇವೆ ಎಂದರೆ ತಪ್ಪಾಗಲಾರದು ಎಲ್ಲಾ ಕಡೆಗಳಲ್ಲೂ ಅಕ್ರಮ ನೇಮಕಾತಿ, ಭಡ್ತಿ, ಸ್ಪರ್ಧಾತ್ಮಕ ಪರೀಕ್ಷೆ, ಕಚೇರಿ ಕೆಲಸ ,ಕಡತ ಪತ್ರಗಳ ವಿಲೇವಾರಿ, ಪ್ರತಿಯೊಂದರಲ್ಲೂ ಭ್ರಷ್ಟಾಚಾರ ಕಂಡು ಬರುತಿದೆ. ಕೆಳ ವರ್ಗದ ಅಧಿಕಾರಿಗಳಿಂದ ಹಿಡಿದು ಮೇಲ್ವರ್ಗದ ಅಧಿಕಾರಿಗಳವರೆಗೆ ರಾಜಕಾರಣಿಗಳವರೆಗೆ ಕಾಣುತ್ತಿದ್ದೇವೆ. ಕಮಿಷನ್ ದಂಧೆಗಳು ಹೆಚ್ಚಾಗುತ್ತಿದೆ. ಈ ಭ್ರಷ್ಟಾಚಾರ ಎಂಬ ಪಿಡುಗು ಬಡವರ ರಕ್ತವನ್ನು ಹೀರುತಿದೆ. ಹಗಲಿರುಳು ಕಷ್ಟಪಟ್ಟು ಓದಿ ಪರೀಕ್ಷೆಗಳಲ್ಲಿ ಫಲಿತಾಂಶಕ್ಕಾಗಿ ಕಾದು ಹೊರಬಂದ ಸತ್ಯದಿಂದ ಕಷ್ಟಪಟ್ಟು ಓದಿದವರಿಗೆ ಬೆಲೆಯೇ ಇಲ್ಲದಂತಾಗಿದೆ. ಈ ಭ್ರಷ್ಟಾಚಾರವೆಂಬ ಪೆಡಂಭೂತದಿಂದ ಅಕ್ರಮ ಎಂಬ ಅನ್ಯಾಯಮಾರ್ಗದಿಂದಾಗಿ ಸ್ವಾತಂತ್ರ್ಯ ಭಾರತವನ್ನು ಎಲ್ಲಿ ಕೊಂಡೊಯ್ಯುತ್ತಿದ್ದೇವೆ ಎಂದು ನಮ್ಮಲ್ಲಿ ನಾವು ಪ್ರಶ್ನಿಸಬೇಕಿದೆ? ಇಂದು ಇವತ್ತಿನ ಮಾಧ್ಯಮಗಳಿಂದ ಕೆಲವೊಂದು ವಿಧಾನಗಳಿಗೆ ಅಂಟಿಕೊಳ್ಳದೆ ಅದರಲ್ಲೇ ಜೋತು ಬೀಳದೆ ಸಮಾಜವನ್ನು ಅರ್ಥೈಸಬೇಕಿದೆ. ಎಲ್ಲವನ್ನು ಎಲ್ಲರನ್ನು ಸಮಾನರಾಗಿ ನೋಡಬೇಕಿದೆ ಸಮಾಜದ ಮೇಲೆ ನಡೆಯುವಂತ ಕ್ರೌರ್ಯ ಅತ್ಯಾಚಾರ, ಅನಾಚಾರ ಇತ್ಯಾದಿಗಳು ಪದೇ ಪದೇ ಹೆಚ್ಚಾಗುತ್ತಿದೆ ಇದಕ್ಕೆ ಕಾರಣ ಯುವ ಜನತೆ ಹಾದಿ ತಪ್ಪುತ್ತಿರುವುದು. ಮಹಿಳೆಯರು ಹೆಣ್ಣು ಮಕ್ಕಳು ಅನ್ಯಾಯವನ್ನು ಪ್ರಶ್ನಿಸದಿರುವುದು, ಜಂಗಮವಾಣಿ ಎಂಬ ಮಾಧ್ಯಮಕ್ಕೆ ಅಂಟಿಕೊಳ್ಳದೆ ಅದನ್ನೇ ಗೀಲಾಗಿ ಕಾಣದೆ ಕೆಲವೊಂದು ಅಸಹ್ಯ ಕೆಟ್ಟ ವಿಚಾರಗಳಿಂದ ಹೊರ ಬರಬೇಕಿದೆ.

ಕಾನೂನುಗಳು ಇನ್ನೂ ಬಲಗೊಳ್ಳಬೇಕಿದೆ, ಅನ್ಯಾಯವನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಧರ್ಮವೆಂಬುದು ಅಫಿಮುವಿದ್ದ ಹಾಗೆ ಎಂದು ಕಾರ್ಲ್ ಮಾರ್ಕ್ಸ್ ಮೊದಲೇ ತಿಳಿಸಿದ್ದಾರೆ. ಅದನ್ನುಹೆಚ್ಚಾಗಿ ಸೇವಿಸಿದಷ್ಟು ಅಮಲು ಜಾಸ್ತಿ ಎಂಬುದು ಅರ್ಥೈಸಬೇಕಿದೆ. ಭ್ರಷ್ಟಾಚಾರದ ವಿರುದ್ಧ ಸಮರಸಾರಬೇಕಿದೆ. ಮಹಿಳೆ, ಹೆಣ್ಣು ಮಗಳು ನಡುರಾತ್ರಿಯಲ್ಲಿ ರಸ್ತೆಯಲ್ಲಿ ಓಡಾಡುವ ಹಾಗೆ ಆಗುವ ಗಾಂಧೀಜಿಯ ಕನಸು ನನಸಾಗಬೇಕಿದೆ. ಹಗಲು ನಡೆಯುವ ಕ್ರೌರ್ಯ ಹೆಚ್ಚಾಗುವ ಈ ಸಂದರ್ಭದಲ್ಲಿ ಆ ಅನ್ಯಾಯವನ್ನು ಮೆಟ್ಟಿ ಹೋರಾಡಬೇಕಿದೆ. ನಾವಿಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿದ್ದೇವೆ ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹನೀಯರ ತ್ಯಾಗವನ್ನು ವಿಮರ್ಶಿಸಬೇಕಿದೆ ಗೋಡ್ಸೆಯ ಹಿಂಬಾಲಕರಾಗಿ ಪೂಜಕರಾಗಿ ಸಾಗುವ ಈ ಯುಗದಲ್ಲಿ ಗಾಂಧೀಜಿಯ ನಾಡು ಇದೇನಾ? ಈ ಎಲ್ಲಾ ಪ್ರಶ್ನೆಗಳಿಂದ? ಉದ್ಭವಿಸುವುದು ಯಾರಿಗೆ ಬಂತು ಎಲ್ಲಿಗೆ ಬಂತು 45ರ ಸ್ವಾತಂತ್ರ್ಯ.

ರೇಷ್ಮಾ ವೀರ ಕ್ರಾಸ್ತ, ತಡಗಜೆ

ರಾಜ್ಯಶಾಸ್ತ್ರ ಉಪನ್ಯಾಸಕಿ

ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!