
ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಆಶ್ರಯದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರ ವತಿಯಿಂದ ನಡೆದ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ವಿಭಾಗದ ಯೂತ್ ರೆಡ್ ಕ್ರಾಸ್ ಘಟಕ ಆ.12 ರಂದು ಉದ್ಘಾಟನೆಗೊಂಡಿತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸುಳ್ಯ ತಾಲೂಕಿನ ಸಭಾಪತಿ ಪಿ.ಬಿ ಸುಧಾಕರ್ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಮುಖ್ಯ ಪ್ರತೀ ಶಾಲೆಯಲ್ಲೂ ವಿದ್ಯಾರ್ಥಿಗಳಿಗೆ ಯೂತ್ ರೆಡ್ ಕ್ರಾಸ್ ಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಸುಳ್ಯ ತಾಲ್ಲೂಕು ರೆಡ್ ಕ್ರಾಸ್ ಘಟಕದ ಜಿಲ್ಲಾಪ್ರತಿನಿಧಿ ಸಿಎ ಗಣೇಶ್ ಭಟ್ ಮಾತನಾಡಿ, ‘ ವಿದ್ಯಾರ್ಥಿಗಳಲ್ಲಿ, ಯುವ ಸಮುದಾಯದಲ್ಲಿ ಸೇವಾ ಮನೋಭಾವವನ್ನು ಮೂಡಿಸಲು ಇರುವ ಸಂಸ್ಥೆಯೇ ರೆಡ್ ಕ್ರಾಸ್ ಗ್ರಾಮೀಣ ಭಾಗದಲ್ಲಿರುವ ಜನರಿಗೆ ಪ್ರಥಮ ಚಿಕಿತ್ಸೆ ಆರೋಗ್ಯಕರ ಆಹಾರ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ತರಬೇತಿಗಳ ಮುಖಾಂತರ ತಿಳಿಸಿಕೊಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಸಂಚಾಲಕರಾದ ಕೆ.ಆರ್ ಗಂಗಾಧರ್ ಇವರು ಮಾತನಾಡಿ ‘ರೆಡ್ ಕ್ರಾಸ್ ಸೊಸೈಟಿಯು ನೊಂದವರ ಪಾಲಿನ ಆಶ್ರಯದಾತನಾಗಿ
ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಹಾಯ ಹಸ್ತವನ್ನು ನೀಡಿ ವೈದ್ಯಕೀಯ ಸೇವೆಯನ್ನು ನೀಡಿ ನೋವನ್ನು ಶಮನಗೊಳಿಸುವ ಸಂಸ್ಥೆಯಾಗಿದೆ. ಅಲ್ಲದೇ ಇಲ್ಲಿ ಯಾವುದೇ ತೆರನಾದ ಜಾತಿ, ಮತ, ಲಿಂಗ, ಭೇದ ಭಾವವಿಲ್ಲದೆ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಿಕೊಳ್ಳುತ್ತದೆ. ಜೊತೆಗೆ ರೆಡ್ ಕ್ರಾಸ್ ಯುದ್ಧ ಕಾಲದ ಸಂದರ್ಭದಲ್ಲೂ ತನ್ನ ಕರ್ತವ್ಯ ನಿರ್ವಹಿಸಿದ ಹೆಗ್ಗಳಿಕೆಯಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಸುಳ್ಯ ತಾಲೂಕು ರೆಡ್ ಕ್ರಾಸ್ ಘಟಕದ ಕಾರ್ಯದರ್ಶಿ ತಿಪ್ಪೇಶಪ್ಪ, ನಿರ್ದೇಶಕಿ ಪದ್ಮಿನಿ, ಕಾಲೇಜಿನ ಪ್ರಾಚಾರ್ಯ ರಮೇಶ್ ಎಸ್, ಮುಖ್ಯ ಶಿಕ್ಷಕರಾದ ಸೀತಾರಾಮ ಎಂ.ಕೆ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಗೌರಿಶಂಕರ ಎಂ.ಬಿ, ನೋಡೆಲ್ ಅಧಿಕಾರಿಗಳಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಜಯರಾಮ್ ಪಿ.ಪಿ, ಶಾಂತಿ ಎ.ಕೆ ಹಾಗೂ ಮತ್ತಿತರು ಉಪಸ್ಥಿತರಿದ್ದರು.
ಕಾಲೇಜಿನ ಹಾಗೂ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ರೆಡ್ ಕ್ರಾಸ್ ಸಂಸ್ಥೆಯಿಂದ ಹೈಜಿನಿಕ್ ಕಿಟ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಪದ್ಮಕುಮಾರ್.ಜಿ.ಆರ್ ನಿರೂಪಿಸಿದರು.