ವಿದ್ಯಾ ಬೋಧಿನಿ ಪ್ರೌಢಶಾಲೆ ಬಾಳಿಲದ ಸಂಸ್ಥಾಪಕ ನೆಟ್ಟಾರು ವೆಂಕಟಸುಬ್ಬರಾವ್ ಅವರ ಸ್ಮರಣಾರ್ಥ ಕುರಿತು ಆ.11 ರಂದು ಬಾಳಿಲದಲ್ಲಿ ಸಾಹಿತ್ಯೋತ್ಸವ ಜರುಗಿತು. ವಿದ್ಯಾಬೋಧಿನೀ ಎಜುಕೇಶನ್ ಸೊಸೈಟಿ ಸಂಚಾಲಕ ಪಿಜಿಎಸ್ ಎನ್ ಪ್ರಸಾದ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎನ್ ವೆಂಕಟ್ರಮಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀ ರಾಧಾಕೃಷ್ಣ ರಾವ್ ಉಡುವೆಕೋಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು .ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹತ್ತನೆಯ ತರಗತಿಯ ವಿದ್ಯಾರ್ಥಿ ನಿ ಅಮೃತಾ ಕೆ ವೆಂಕಟಸುಬ್ಬ ರಾವ್ ಅವರ ಬಗ್ಗೆ ಭಾಷಣ ಮಾಡಿದಳು. ಶಾಲಾ ವಿದ್ಯಾರ್ಥಿನಿಯರು ಪೂಜ್ಯರ ಬಗ್ಗೆ ಹಾಡು ಹಾಡಿದರು.
ಮುಖ್ಯ ಶಿಕ್ಷಕರಾದ ಯಶೋಧರ ನಾರಾಲು ಪ್ರಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿ, ಸಂಸ್ಕೃತ ಶಿಕ್ಷಕ ವೆಂಕಟೇಶ್ ಕುಮಾರ್ ಉಳುವಾನ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಹಿಂದಿ ಭಾಷಾ ಶಿಕ್ಷಕರಾದ ಲೋಕೇಶ್ ಬೆಳ್ಳಿಗೆ ನಿರ್ವಹಿಸಿದರು.
ಸಾಹಿತ್ಯೋತ್ಸವದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಶುಭಾಷಣ ,ಭಾವಗೀತೆ ,ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಹಾಡು ಮತ್ತು ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸುಮಾರು 110 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀ ಮಹಾಬಲ ಕಲ್ಮಡ್ಕ ಶ್ರೀಮತಿ ಶಶಿಕಲಾ ಕಿ ಶ್ರೀಮತಿ ವಜ್ರಾಕ್ಷಿ ಸಹಕರಿಸಿದರು. ಕೆಪಿಎಸ್ ಬೆಳ್ಳಾರೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರು.