ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕಲ್ಮಕಾರು ಭಾಗದಲ್ಲಿ ಜಲ ಸ್ಫೋಟಗೊಂಡು ನದಿ ಉಕ್ಕಿ ಹರಿದು ಹಾನಿಯಾದ ಪ್ರದೇಶಗಳಿಗೆ ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಕಾಂಗ್ರೆಸ್ಸಿನ ನಾಯಕರುಗಳು ಭೇಟಿ ನೀಡಿದರು. ಹರಿಹರ ಪಲ್ಲತಡ್ಕ ಉದ್ಯಮಿ ರಾಮಕೃಷ್ಣ ಗೌಡ ಕುದ್ಕುಳಿ ರವರ ಮಿರಮಿಸು ಸಂಕೀರ್ಣದಲ್ಲಿ ಸಭೆ ನಡೆಸಿದರು. ಸಂಪೂರ್ಣವಾಗಿ ಕೊಚ್ಚಿ ಹೋಗಿರುವ ಅಂಗಡಿ ಮಾಲಕರಿಗೆ ತಲಾ ಹತ್ತು ಸಾವಿರದಂತೆ ಪರಿಹಾರ ಧನ ಚೆಕ್ ವಿತರಿಸಿದರು.
ಅಲ್ಲದೆ ಸಂತ್ರಸ್ತರಾದ 150ಕ್ಕಿಂತಲೂ ಹೆಚ್ಚು ಮಂದಿಗೆ ಆಹಾರ ಕಿಟ್ ವಿತ್ತರಿಸಿದರು. ಇದೇ ಸಂದರ್ಭದಲ್ಲಿ ಪರಿಹಾರ ಕಾರ್ಯಗಳನ್ನು ನಡೆಸುವ ಸಂದರ್ಭದಲ್ಲಿ ಕ್ರೇನ್ ನಿರ್ವಾಹಕ ಆಯತಪ್ಪಿ ಹೊಳೆಗೆ ಬಿದ್ದು ಕೊಚ್ಚಿ ಹೋಗುತ್ತಿದ್ದವನನ್ನು ರಕ್ಷಿಸಿದ ಸೋಮಶೇಖರ ಕಟ್ಟೆಮನೆ ರವರನ್ನು ಸನ್ಮಾನಿಸಿದರು. ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಮಾರೋಪ ಹಾದಿಯಲ್ಲಿ ತಕ್ಷಣ ಕೆಲಸ ನಿರ್ವಹಿಸಿದನ್ನು ಸ್ಮರಿಸಿಕೊಂಡರು. ನಂತರ ನೆರೆ ಪೀಡಿತ ಗ್ರಾಮಗಳಿಗೂ ಭೇಟಿ ನೀಡಿ ಪರಿಶೀಲಿಸಿದರು.
ಅವರೊಂದಿಗೆ ಕಾಂಗ್ರೆಸ್ ಮುಖಂಡರುಗಳಾದ ನಂದಕುಮಾರ್, ಕೃಷ್ಣಪ್ಪ, ಡಾ. ರಘು, ನಿತ್ಯಾನಂದ ಮುಂಡೋಡಿ, ಧನಂಜಯ ಅಡ್ಪಂಗಾಯ, ವಿಜಯಕುಮಾರ್ ಸೊರಕೆ, ಭರತ್ ಮುಂಡೋಡಿ, ಜಿಲ್ಲಾ ಕಿಸಾನ್ ಘಟಕದ ಉಪಾಧ್ಯಕ್ಷ ಸುಳ್ಯ ಬ್ಲಾಕ್ ಉಸ್ತುವಾರಿ ಮೋಹನ್ ಕಲ್ಮಂಜ, ಕಡಬ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರು ಉಪಸಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ. ಜಯರಾಮ ಸ್ವಾಗತಿಸಿ, ಸತೀಶ್ ಕೂಜುಗೋಡು ಕಾರ್ಯಕ್ರಮ ನಿರೂಪಿಸಿದರು.