ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಮತ್ತು ಸಾಂಪ್ರದಾಯಿಕ ವಿಶೇಷತೆಯ ಬಗ್ಗೆ ತಿಳುವಳಿಕೆ ಮೂಡಿಸುವ ಕುರಿತಾಗಿ ಆಟಿ ಉತ್ಸವ ಕಾರ್ಯಕ್ರಮವನ್ನು ಕೆ.ವಿ.ಜಿ. ಅಮರ ಜ್ಯೋತಿ ಪಿ.ಯು. ಕಾಲೇಜಿನಲ್ಲಿ ಆ.10 ರಂದು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಆಟಿ ಸಾಂಪ್ರದಾಯಿಕ ಅಡುಗೆ ತಯಾರಿ, ಜನಪದ ನೃತ್ಯ ಮತ್ತು ಹಾಡು ಸಾಂಪ್ರದಾಯಿಕ ಕರಕುಶಲ ವಸ್ತುಗಳ ತಯಾರಿಯ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ರೊ| ಲತಾ ಮಧುಸೂಧನ್ ಅಧ್ಯಾಪಕರಾದ ಪ್ರೊ. ಸ್ಮಿತಾ ಉಜ್ವಲ್, ಪ್ರೊ. ಕೃಷ್ಣರಾಜ್, ಪ್ರೊ.ಪ್ರವೀಣ್, ಪ್ರೊ. ಮನೋಹರ್, ಸುಜಿತ್, ಲಕ್ಷ್ಮಿಲಾವಣ್ಯ, ಹರ್ಷಿತಾ ರಂಜಿತ್ ಸಹಕರಿಸಿದ್ದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಯಶೋದ ರಾಮಚಂದ್ರ, ಉಪಪ್ರಾಂಶುಪಾಲ ದೀಪಕ್ ವೈ ಆರ್ ಹಾಗೂ ಅಧ್ಯಾಪಕ ವೃಂದದವರು ಹಾಗೂ ಇತರರು ಉಪಸ್ಥಿತರಿದ್ದರು.