Ad Widget

ಜಟ್ಟಿಪಳ್ಳ :- ಮಾನಸ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆ, ಪದಗ್ರಹಣ ಸಮಾರಂಭ

ಮಾನಸ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಆ.07 ರಂದು ಜಟ್ಟಿಪಳ್ಳದ ಯುವ ಸದನದಲ್ಲಿ ಜರುಗಿತು. ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪುರುಷೋತ್ತಮ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

. . . . . . . . .

ಮುಖ್ಯ ಅತಿಥಿಗಳಾಗಿ ಕೆವಿಜಿ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕಿ ಅರ್ಚನಾ ಆರ್ ರೈ ಆಗಮಿಸಿ ಪ್ರಮಾಣ ವಚನ ಭೋದಿಸಿದರು. ಮಹಿಳಾ ಮಂಡಲದ ಸಲಹೆಗಾರ ರಘುನಾಥ್ ಜಟ್ಟಿಪಳ್ಳ, ಗೌರವಾಧ್ಯಕ್ಷೆ ಚಂದ್ರಾಕ್ಷಿ.ಜೆ ರೈ ಉಪಸ್ಥಿತರಿದ್ದರು. ಮಹಿಳಾ ಮಂಡಲದ ಅಧ್ಯಕ್ಷೆ ಸುನೀತಾ ರಾಮಚಂದ್ರ ಸಭಾಧ್ಯಕ್ಷತೆ ವಹಿಸಿದ್ದರು. ಜಯಂತಿ ರೈ ಪ್ರಾರ್ಥಿಸಿದರು.

. . . . . . .

ಸವಿತಾ ಲಕ್ಷ್ಮಣ ಸ್ವಾಗತಿಸಿದರು. ದೀಪಾ ವಿಜಯಕುಮಾರ್ ವರದಿ ವಾಚಿಸಿ ಭಾರತಿ ಬಂಟ್ವಾಳ ಲೆಕ್ಕ ಪತ್ರ ಮಂಡಿಸಿದರು. ನೂತನ ಅಧ್ಯಕ್ಷೆ ರೇವತಿ ಗೋಪಾಲ್, ಕಾರ್ಯದರ್ಶಿ ಶೈಲಜಾ ಪಿ ರೈ, ಖಜಾಂಜಿ ಪಾರ್ವತಿ ನಾರಾಯಣ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲು ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading