ಸುಳ್ಯದ ವೆಂಕಟರಮಣ ಸೊಸೈಟಿಯ ಸಾಮಾನ್ಯ ಸಭೆಯಲ್ಲಿ ಸಂಘದ ಇಬ್ಬರು ನಿರ್ದೇಶಕರಿಗೆ ಸನ್ಮಾನ ನಡೆಸಲಾಯಿತು.
ಸಂಘದ ನಿರ್ದೇಶಕರಾದ ಪಿ.ಎಸ್ ಗಂಗಾಧರರವರು ಟಿಎಪಿಸಿಎಂಎಸ್ ಇದರ ಉಪಾಧ್ಯಕ್ಷರಾಗಿ , ಹಾಗೂ ಇನ್ನೋರ್ವ ನಿರ್ದೇಶಕರಾಗ ಎ.ವಿ ತೀರ್ಥರಾಮರವರು ಕರ್ನಾಟಕ ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇಬ್ಬರಿಗೂ ಸೊಸೈಟಿಯ ಸಾಮಾನ್ಯ ಸಭೆಯಲ್ಲಿ ಸನ್ಮಾನ ನಡೆಸಲಾಯಿತು.
ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮ, ಉಪಾಧ್ಯಕ್ಷ ಮೋಹನ್ ರಾಮ್ ಸುಳ್ಳಿ, ನಿರ್ದೇಶಕರಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಕೆ.ಸಿ ನಾರಾಯಣ ಗೌಡ, ಚಂದ್ರಾಕೋಲ್ಚಾರ್, ದಾಮೋದರ ನಾರ್ಕೋಡು, ದಿನೇಶ್ ಮಡಪ್ಪಾಡಿ, ಕೆ.ಸಿ ಸದಾನಂದ, ಹೇಮಚಂದ್ರ ಐ.ಕೆ, ಮಹಾತ್ಮಗಾಂಧಿ ಮಲ್ನಾಡ್ ಪ್ರೌಢಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ ವಿಶ್ವನಾಥ, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್ ಎಂ, ಸಹಾಯಕ ಪ್ರಧಾನ ವ್ಯವಸ್ಥಾಪಕ ಮನೋಜ್ ಪಾನತ್ತಿಲ, ಸಿಬ್ಬಂದಿಗಳಾದ ಸುರೇಶ್, ಕಾರ್ತಿಕ್ ಉಪಸ್ಥಿತರಿದ್ದರು.