ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರ ಇದರ ಉಪಕೇಂದ್ರ ಎಲಿಮಲೆಯಲ್ಲಿ ಸಮಾಜ ಮತ್ತು ಕುಟುಂಬ ಕಲ್ಯಾಣ ಯೋಜನೆ ಹಾಗೂ ತಂಬಾಕು ನಿಯಂತ್ರಣ ಕೋಶ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಚ್ರಪ್ಪಾಡಿಯಲ್ಲಿ ತಂಬಾಕು ನಿಯಂತ್ರಣ ಸಮಿತಿಯನ್ನು ಆ.06 ರಂದು ರಚಿಸಲಾಯಿತು. ಹಾಗೂ ತಂಬಾಕು ನಿಯಂತ್ರಣ ಖಾಯಿದೆ (COTPA-2003) ಬಗ್ಗೆ ಮಾವಿನಕಟ್ಟೆ ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಕು.ಮೋನಿಷಾ ಜಿ.ಎಸ್. ರವರು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ತಂಬಾಕು ರಹಿತ ಶಾಲೆ ಮಾಡುವಂತೆ ಉತ್ತೇಜಿಸಲಾಯಿತು.
ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶ್ವೇತ, ಶಾಲಾ ಉಸ್ತುವಾರಿ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಪೋಷಕರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.