ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹರ್ ಘರ್ ತಿರಂಗ ಕಾರ್ಯಕ್ರಮದಂಗವಾಗಿ ಆ.13 ರಂದು ಸಂಜೆ 6.00 ಕ್ಕೆ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ ಮತ್ತು ಸುಳ್ಯ ನಗರ ಪಂಚಾಯತ್ ಸಹಯೋಗದಲ್ಲಿ ಯಕ್ಷ ರಂಗಾಯಣ ಕಾರ್ಕಳ ಅಭಿನಯಿಸುವ “ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ-1837” ನಾಟಕದ ಪ್ರದರ್ಶನವನ್ನು ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆಯಲ್ಲಿ ಏರ್ಪಡಿಸಲಾಗಿದೆ.ಹಿರಿಯ ಸಾಹಿತಿ ಡಾ| ಪ್ರಭಾಕರ ಶಿಶಿಲ ರಚಿಸಿರುವ ಈ ನಾಟಕವನ್ನು ರಂಗಮಾಂತ್ರಿಕ ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದಾರೆ. ನೀನಾಸಂನ ಆರು ಜನ ಪ್ರಬುದ್ಧ ಕಲಾವಿದರು ಹಾಗೂ ಹವ್ಯಾಸಿ ಕಲಾವಿದರನ್ನೊಳಗೊಂಡ ಈ ನಾಟಕ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕಾಗಿಯೇ ಸಿದ್ಧಗೊಂಡ ವಿಶೇಷ ಪ್ರಯೋಗವಾಗಿದೆ.1857 ರ ಸಿಪಾಯಿ ದಂಗೆಗಿಂತಲೂ ಎರಡು ದಶಕಗಳ ಮೊದಲೇ ಅಮರ ಸುಳ್ಯದಲ್ಲಿ ಹಿರಿಯ ಜಮೀನ್ದಾರ ಕೆದಂಬಾಡಿ ರಾಮೇಗೌಡರ ನಾಯಕತ್ವದಲ್ಲಿ ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದ ರೋಚಕತೆಯನ್ನು ಯಕ್ಷ ರಂಗಾಯಣದ ಕಲಾವಿದರು ಅತ್ಯಂತ ಮನೋಜ್ಞವಾಗಿ ಪ್ರಸ್ತುತಪಡಿಸಲಿದ್ದಾರೆ. ಸಮಯಕ್ಕೆ ಸರಿಯಾಗಿ ಆರಂಭವಾಗಲಿರುವ ಈ ಕಾರ್ಯಕ್ರಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ದೇಶಾಭಿಮಾನಿಗಳು ವೀಕ್ಷಿಸಬೇಕೆಂದು ಸುಳ್ಯ ನಗರ ಪಂಚಾಯತ್ ನ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ ಹಾಗೂ ರಂಗಮನೆ ರೂವಾರಿ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.
- Sunday
- November 24th, 2024