ವಿಧಿಯ ಆಟ ತುಂಬಾ ಕ್ರೂರ, ಸೂತ್ರಧಾರನ ಆಟ ಘೋರ, ಕೊಚ್ಚಿ ಹೋದ ಬದುಕ ತೀರ, ಮನಸ್ಸು ಆಗಿದೆ ತುಂಬಾ ಭಾರ…
ಎಲ್ಲಾ ಇದ್ದ ಊರಿನಲ್ಲಿ ಏನೂ ಇಲ್ಲದಾಗಿದೆ, ಎಲ್ಲಾ ಕೊಚ್ಚಿ ಹೋಗಿದೆ, ಖುಷಿಯು ದೂರವಾಗಿದೆ, ದುಃಖ ಎಲ್ಲೆಡೆ ತುಂಬಿದೆ…
ದೂರವಿರುವ ಗಗನದಿಂದ ಘೋರವಾದ ಮಳೆಯು ಸುರಿದು ಬದುಕು ದುಸ್ತರವಾಗಿದೆ, ಈ ಊರೇ ತತ್ತರವಾಗಿದೆ, ಕಣ್ಣೀರೇ ಉತ್ತರವಾಗಿದೆ…
ಕನಸಿನಲ್ಲೂ ನೆನೆಸದಂತಹ ಸಿಡಿಲು ಬಂದು ಬಡಿದಿದೆ, ಮನಸ್ಸಿನಲ್ಲಿ ಮಾಸಿ ಹೋಗದ ಗಾಯವಿಂದು ಆಗಿದೆ, ಸೂತ್ರಧಾರನ ಆಟದಲ್ಲಿ ಬದುಕು ಕೊಚ್ಚಿ ಹೋಗಿದೆ, ಎಲ್ಲಾ ನಾಶವಾಗಿದೆ…
ಊರಿಗೂರು ಬೆಸೆಯುವಂತಹ ಸೇತುವೆ ಮುರಿದೋಗಿದೆ, ಮಾನವೀಯತೆ ಎಂಬ ಸೇತುವೆ ಜೀವ ತಳೆದು ನಿಂತಿದೆ, ಕಷ್ಟಗಳಿಗೆ ಕೈಯ ಚಾಚಲು ನೂರು ಕೈಗಳು ಸೇರಿವೆ, ಇಲ್ಲಿ ಪ್ರೀತಿಯೇ ಉಸಿರಾಗಿದೆ…
ಮುರಿದುಹೋದ ಮನೆಗಳನ್ನು ಜೋಡಿಸುವ ಕಾರ್ಯ ನಡೆದು ಮಾನವೀಯತೆ ಮೌಲ್ಯವನ್ನು ಜಗಕೆ ಇಂದು ಸಾರಿದೆ, ಬಿದ್ದವರ ಹಿಡಿದೆಬ್ಬಿಸಿ ಬದುಕು ಮುಂದೆ ಸಾಗಿದೆ, ಕಣ್ಣೀರ ಜೊತೆಗೆ ನಡೆದಿದೆ…
✍️ಉಲ್ಲಾಸ್ ಕಜ್ಜೋಡಿ