ಭಾರೀ ಮಳೆ ಹಾನಿಗೊಳಗಾದ ಘಟನಾ ಸ್ಥಳಗಳಿಗೆ ಸಚಿವ ಎಸ್.ಅಂಗಾರ ಆ.02 ರಂದು ಭೇಟಿ ನೀಡಿದರು. ಹರಿಹರ ಪಲ್ಲತ್ತಡ್ಕ ಗ್ರಾಮದ ಹರಿಹರ ಪೇಟೆಯಲ್ಲಿ ಭಾರೀ ಹಾನಿ ಸಂಭವಿಸಿದ್ದು, ಘಟನಾ ಸ್ಥಳದಲ್ಲಿ ಜನಸ್ತೋಮವೇ ಸೇರಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಸ್.ಅಂಗಾರ “ಮಳೆಯಿಂದ ಉಂಟಾದ ಹಾನಿಗಳ ಬಗ್ಗೆ ಮಾಹಿತಿ ಪಡೆದ ಕೂಡಲೇ ಆಗಮಿಸಿದ್ದೇನೆ. ರಾತ್ರಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಇಂದು ಬೆಳಿಗ್ಗೆ ಹರಿಹರ ಪಲ್ಲತ್ತಡ್ಕಕ್ಕೆ ಭೇಟಿ ನೀಡಿದ್ದೇನೆ.
ಮನೆ ಹಾನಿ, ಇತರೆ ಹಾನಿ, ರಸ್ತೆ, ಸೇತುವೆ ಹಾನಿಗಳ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತುರ್ತು ಕ್ರಮಕ್ಕೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಈಗಿನಿಂದಲೇ ಪರಿಹಾರ ಕಾರ್ಯ ನಡೆಸಲಾಗುತ್ತಿದೆ ಎಂದ ಅವರು ಘಟನೆಗಳ ಬಗ್ಗೆ ಮುಖ್ಯಮಂತ್ರಿಗಳಿಗೂ ಮಾಹಿತಿ ನೀಡುವ ಕೆಲಸ ಮಾಡಲಾಗುವುದು” ಎಂದರು.
ವರದಿ :- ಉಲ್ಲಾಸ್ ಕಜ್ಜೋಡಿ