ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ನೇತಾರ ಪ್ರವೀಣ್ ನೆಟ್ಟಾರು ಅವರ ಮನೆಗೆ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಭೇಟಿ ನೀಡಿ ಧೈರ್ಯ ತುಂಬಿದರು. ಹಾಗೂ ರೂ. 5 ಲಕ್ಷದ ಚೆಕ್ ನೀಡಿದರು.
ಈ ಸಂದರ್ಭದಲ್ಲಿ ಪ್ರವೀಣ್ ಅವರ ಪತ್ನಿ ನೂತನ ರವರು ಬೆಳ್ಳಾರೆಯ ಆರೋಗ್ಯ ಕೇಂದ್ರದ ಅವ್ಯವಸ್ಥೆಗಳ ಬಗ್ಗೆ ವಿವರ ನೀಡಿದರು. ಆಸ್ಪತ್ರೆ ಅಪ್ ಗ್ರೇಡ್ ಆಗಬೇಕು, ರಾತ್ರಿ ಹೊತ್ತಿನಲ್ಲಿ ಡಾಕ್ಟ್ರ ವ್ಯವಸ್ಥೆ ಇರುವುದಿಲ್ಲ. ಡಾಕ್ಟರ್ ಇದ್ದಿದ್ದರೇ ಪ್ರಥಮ ಚಿಕಿತ್ಸೆ ಆಗಿದ್ರೆ ನನ್ನ ಪತಿಯನ್ನು ಉಳಿಸಿಕೊಳ್ಳಬಹುದಿತ್ತು. ತುಂಬ ರಕ್ತಸ್ರಾವದಿಂದ ಅವರು ಪುತ್ತೂರಿಗೆ ಮುಟ್ಟುವ ಮೊದಲೇ ಕೊನೆ ಉಸಿರು ನಿಂತು ಹೋಗಿದೆ. ಅದ್ದರಿಂದ ಈ ಬಗ್ಗೆ ಶೀಘ್ರ ಗಮನ ಹರಿಸಲು ಮನವಿ ಮಾಡಿಕೊಂಡರು. ಈ ಬಗ್ಗೆ ಬಗ್ಗೆ ಪಾರ್ಲಿಮೆಂಟಿನಲ್ಲಿ ವಿಷಯವನ್ನು ಪ್ರಸ್ತಾಪಿಸಿ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡುತ್ತೇನೆಂದು ಭರವಸೆ ನೀಡಿದರು.