ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್ ಬಾಲಕೃಷ್ಣ ರವರು ಜು 25 ರಂದು ಸಂಘದ ಪದಾಧಿಕಾರಿಗಳೊಂದಿಗೆ ಸುಳ್ಯದಲ್ಲಿ ಉಚಿತ ವಸತಿ ನಿಲಯಕ್ಕಾಗಿ ಮಂಜೂರಾದ ಸ್ಥಳಕ್ಕೆ ಆಗಮಿಸಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಮಾತನಾಡಿ, ಈ ಭಾಗದ ಹೆಚ್ಚಿನ ಗೌಡ ಸಮುದಾಯದವರು ಕೃಷಿ ಆಧಾರಿತ ಜೀವನ ನಡೆಸುತ್ತಿರುವ ಬಡ ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಬೇಕೆಂಬುವುದು ನನ್ನ ಉದ್ದೇಶ. ಈ ನಿಟ್ಟಿನಲ್ಲಿ ಈ ಭಾಗದ ಜನತೆಯ ಬೇಡಿಕೆಯಂತೆ ಉಚಿತ ವಸತಿ ನಿಲಯದ ಸ್ಥಾಪನೆಗೆ ಅನೇಕ ಸಮಯದಿಂದ ನಾನು ಪ್ರಯತ್ನಿಸುತ್ತಿದ್ದೆ. ಈ ಬಾರಿ ಆ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ನನಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ, ಸಹಾಯಕ ಕಾರ್ಯದರ್ಶಿ ರಾಘವೇಂದ್ರ, ನಿರ್ದೇಶಕ ಲೋಕೇಶ್, ರಘುಗೌಡ, ನೆಲ್ಲಿಗೆರೆ ಬಾಲು, ಪೂರ್ಣೇಶ್, ಮಂಜೇಗೌಡ, ಡಾ. ರಮೇಶ್, ಪುಟ್ಟ ಸ್ವಾಮಿ, ಹನುಮಂತರಾಯಪ್ಪ ಮತ್ತು ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಊರುಬೈಲು, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ಉಪಸ್ಥಿತರಿದ್ದರು.